ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಶ್ರೀ ಮಾಚೀದೇವರ ದೇವಾಲಯ ನಿರ್ಮಾಣಕ್ಕೆ ಪಂಚಾಯಿತಿ ವತಿಯಿಂದ ಶ್ರೀ ಮಾಚೀದೇವರ ದೇವಾಲಯದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿತು.
ತಾಲ್ಲೂಕಿನ ಸಾಸಲು ಹೋಬಳಿಯ ಆರೂಡಿ ಗ್ರಾಮದಲ್ಲಿ ಭಾನುವಾರದಂದು ದೊಡ್ಡಬಳ್ಳಾಪುರ ಶ್ರೀ ಮಾಚೀದೇವ ಮಡಿವಾಳರ ಸಂಘದ ತಾಲ್ಲೂಕು ಅಧ್ಯಕ್ಷ ಜಿ. ರಂಗಸ್ವಾಮಿ ಮತ್ತು ಎಲ್ಲಾ ಪದಾಧಿಕಾರಿಗಳು ಹಾಗೂ ಗ್ರಾಮ ಮತ್ತು ಸಮುದಾಯದ ಎಲ್ಲಾ ಪ್ರಮುಖರ ಸಮಕ್ಷಮದಲ್ಲಿ ಸಂಘದ ಉಪಾಧ್ಯಕ್ಷ ನಂಜಪ್ಪರವರ ಮುಂದಾಳತ್ವದಲ್ಲಿ ಶ್ರೀ ಮಾಚೀದೇವರ ಅಧ್ಧೂರಿ ಜಯಂತೋತ್ಸವ ಮತ್ತು ಶ್ರೀ ಮಾಚೀದೇವರ ದೇವಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಪಂಚಾಯಿತಿ ವತಿಯಿಂದ ನೀಡಲಾಗಿರುವ 30 × 40 ಖಾಲಿ ನಿವೇಶನದಲ್ಲಿ ಶ್ರೀ ಮಾಚೀದೇವರ ದೇವಾಲಯದ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿತು. ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಮಾಚೀದೇವ ಮಡಿವಾಳರ ಸಂಘದ ಗೌರವಾಧ್ಯಕ್ಷ ಆರ್ ಮುತ್ತರಾಯಪ್ಪ, ಅಧ್ಯಕ್ಷ ಜಿ ರಂಗಸ್ವಾಮಿ, ಉಪಾಧ್ಯಕ್ಷರಾದ ನಂಜಪ್ಪ , ಪ್ರಧಾನ ಕಾರ್ಯದರ್ಶಿ ಚಂದ್ರು, ಖಜಾಂಚಿ ಮುನಿರಾಜು ,
ಸಹ ಕಾರ್ಯದರ್ಶಿ ಬಾಬು, ಬೊಮ್ಮಲಿಂಗೇಶ್ವರ ಮಾಚೀದೇವರ ದೇವಾಲಯದ ಅಧ್ಯಕ್ಷ ಕೆ ಬಿ ರಾಜಣ್ಣ , ನಿರ್ದೇಶಕರಾದ ಎ ನಾಗರಾಜ್, ಪಿ ಹೆಚ್ ರಮೇಶ್, ನರಸಿಂಹಮೂರ್ತಿ, ಚನ್ನಕೇಶವ ಮೂರ್ತಿ, ಮಹಿಳಾ ನಿರ್ದೇಶಕರಾದ ಲಕ್ಷ್ಮಮ್ಮ, ಬೆಳವಂಗಲ ಹೋಬಳಿ ಅಧ್ಯಕ್ಷರಾದ ವೀರಣ್ಣ, ಸಂಚಾಲಕರಾದ ಹರೀಶ್ ,ಗಂಗರಾಜು, ಕೃಷ್ಣಪ್ಪ , ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

