ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹಾಡೋನಹಳ್ಳಿ ಗ್ರಾಮದಲ್ಲಿ ಭಾರತೀಯ ಕಿಸಾನ್ ಸಂಘದ ನೂತನ ಗ್ರಾಮ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಕೀರ್ತಿ ಕುಮಾರ ಹೆಚ್. ಆರ್. ಉಪಾಧ್ಯಕ್ಷರಾಗಿ ಶಿವಕುಮಾರ್ ಹೆಚ್. ಎ. ಪ್ರದಾನ ಕಾರ್ಯದರ್ಶಿಯಾಗಿ ಮಧು ಹೆಚ್.ಎಂ., ಖಜಾಂಚಿ ನಾಗರಾಜ್ ಹೆಚ್. ಎಸ್., ಸಂಘಟನಾ ಕಾರ್ಯದರ್ಶಿ ಮದನ್ ಗೌಡ ಹೆಚ್. ಕೆ., ಸಂಚಾಲಕರಾಗಿ ಶಿಲ್ಪ, ಹೆಚ್. ಎನ್ .ರೂಪಾ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುಬ್ಬಣ್ಣ ಹಾಗೂ ಚೌಡಪ್ಪ ರವರನ್ನು ಆಯ್ಕೆ ಮಾಡಲಾಗಿದೆ.
ಗ್ರಾಮ ಸಮಿತಿ ನೂತನ ಅಧ್ಯಕ್ಷ ಕೀರ್ತಿಕುಮಾರ್ ಮಾತನಾಡಿ ಬಹು ಜನ ಕೃಷಿಯನ್ನು ಅವಲಂಬಿಸಿದ್ದು, ರೈತರು ದೇಶದ ಆರ್ಥಿಕತೆಯ ಅಡಿಪಾಯ. ಸುಡುವ ಬಿಸಿಲು, ಮಳೆ, ಚಳಿ ಎನ್ನದೆ ಹೊಲದಲ್ಲಿ ದುಡಿದು ಎಲ್ಲರಿಗೂ ದಾನ್ಯ ಒದಗಿಸುವಲ್ಲಿ ಪ್ರಮುಖ ಪಾತ್ರ ರೈತನದಾಗಿರುತ್ತೆ. ಅದ್ದರಿಂದ ಇಂತಹ ರೈತರ ಪರವಾಗಿ ಬಗ್ಗೆ ಕಾಳಜಿಯಿಂದ ಸಮಸ್ಯೆಗಳಿಗೆ ಸ್ಪಂದಿಸಿ ನನ್ನ ಶಕ್ತಿ ಮೀರಿ ಶ್ರಮಿಸುತ್ತೆನೆ ಎಂದರು .
ತಾಲ್ಲೂಕು ಕಾರ್ಯದರ್ಶಿ ಡಾ. ಕುಮಾರ್ ನಾಯ್ಕ ಮಾತನಾಡಿ ರೈತನ ಸಮಸ್ಯೆ ಎಂದರೆ ಬೆಳೆ ನಷ್ಟ, ಸಾಲದ ಹೊರೆ, ಮತ್ತು ಮಾರುಕಟ್ಟೆ ಬೆಲೆಗಳ ಅಸ್ಥಿರತೆ ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾಗಿವೆ.
ಪಿಎಂ-ಕಿಸಾನ್ ಯೋಜನೆಯಡಿ ಸರ್ಕಾರವು ವಾರ್ಷಿಕ 6,000 ಆರ್ಥಿಕ ನೆರವು ನೀಡುವ ಮೂಲಕ ರೈತರಿಗೆ ಬೆಂಬಲ ನೀಡುತ್ತಿದೆ. ರೈತರ ಏಳಿಗೆಯೇ ದೇಶದ ಏಳಿಗೆ. ಅವರ ಕಷ್ಟಗಳನ್ನು ಅರ್ಥಮಾಡಿಕೊಂಡು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಹೌದು.
ರೈತರು ಪ್ರಮುಖವಾಗಿ ಸಾಲದ ಸುಳಿ, ಅನಿರೀಕ್ಷಿತ ಹವಾಮಾನ ವೈಪರೀತ್ಯ (ಬರ/ಪ್ರವಾಹ), ನೀರಿನ ಕೊರತೆ ಮತ್ತು ಬೆಳೆಗಳಿಗೆ ಸೂಕ್ತ ಬೆಲೆ ಸಿಗದಿರುವಂತಹ ತೀವ್ರ ಆರ್ಥಿಕ ಹಾಗೂ ತಾಂತ್ರಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕೀಟನಾಶಕಗಳ ಅತಿಯಾದ ಬಳಕೆ, ಮಣ್ಣಿನ ಫಲವತ್ತತೆ ಕುಸಿತ ಮತ್ತು ಮಾರುಕಟ್ಟೆಯಲ್ಲಿನ ಏಜೆಂಟ್ಗಳ ಹಾವಳಿಯಿಂದಾಗಿ ಕೃಷಿಯು ಅನಿಶ್ಚಿತ ಹಾಗೂ ನಷ್ಟದಾಯಕವಾಗುತ್ತಿದೆ.
ಅದ್ದರಿಂದ ಆತ್ಮಹತ್ಯೆ ಸಂಭವಿಸುತ್ತವೆ. ಸರ್ಕಾರವಾಗಲಿ ಜನ ಪ್ರತಿನಿಧಿಗಳಾಗಲಿ ರೈತ ಪರ ಅವರಿಗೆ ಶಕ್ತಿ ತಂಬಬೇಕಾಗುತ್ತೆ ಎಂದರು.
“ಭಾರತೀಯ ಕಿಸಾನ್ ಸಂಘ (BKS) 1978 ರಲ್ಲಿ ದತ್ತೋಪಂತ್ ಥೇಂಗಡಿ ಅವರಿಂದ ಸ್ಥಾಪಿತವಾದ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನ ಅಂಗಸಂಸ್ಥೆಯಾಗಿರುವ ಒಂದು ಪ್ರಮುಖ ರೈತ ಸಂಘಟನೆಯಾಗಿದೆ. ಇದು ರೈತರ ಸಮಗ್ರ ಅಭಿವೃದ್ಧಿ, ಬೆಳೆಗಳಿಗೆ ಯೋಗ್ಯ ಬೆಲೆ, ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ರಾಜಕೀಯೇತರ, “ರೈತರಿಂದ, ರೈತರಿಗಾಗಿ, ರೈತರ” ಸಂಘಟನೆಯಾಗಿದೆ”.
ಅಂಬಿಕಾ, ಜಿಲ್ಲಾ ಕಾರ್ಯದರ್ಶಿ, ಭಾರತೀಯ ಕಿಸಾನ್ ಸಂಘ.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ನೆಲ್ಲುಗುದಿಗೆ ಚಂದ್ರು ಜಿಲ್ಲಾ ಸಹಕಾರ್ಯದರ್ಶಿ ಶ್ರೀಮತಿ ಅನೂಷ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಅನಂದ್ ಕುಮಾರ್, ಹಾಡೋನಹಳ್ಳಿ ಗ್ರಾಮದ ಪ್ರಮುಖರಾದ ಆರುಣ್ ಕುಮಾರ್ ಹೆಚ್, ಆರ್.ಮುನೀಂದ್ರ, ಮೋಹನ, ರಾಮಮೂರ್ತಿ,ಸಂದೀಪ್, ಉದಯ್,ಉಪೇಂದ್ರ, ಸಂದೀಪ್ ಹಾಗು ಗ್ರಾಮಸ್ಥರು ಹಾಜರಿದ್ದರು.

