ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಎದುರಾಗಿರುವ ಗೋಣಿ ಚೀಲದ ಸಮಸ್ಯೆ ಇನ್ನೂ ನಿವಾರಣೆಯಾಗಿಲ್ಲ. ಇದರಿಂದ ರಾಜ್ಯದಲ್ಲಿ ಜ.1ರಿಂದ ಆರಂಭವಾಗಬೇಕಿದ್ದ ರಾಗಿ ಖರೀದಿ ಫೆಬ್ರವರಿ ತಿಂಗಳು ಕೋಣೆಯಾಗುತ್ತ ಬಂದರೂ ಆರಂಭವಾಗಿಲ್ಲ. ರಾಗಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ಇನ್ನಿತರೆ ಜಿಲ್ಲೆಗಳಲ್ಲಿ 2025-26ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ 6 ಲಕ್ಷ ಮೆಟ್ರಿಕ್‌ಟನ್‌ಗಳಷ್ಟು ರಾಗಿ ಖರೀದಿಸಲು ನೋಂದಣಿ ಮಾಡಿಕೊಳ್ಳಲಾಗಿದೆ.
ನೋಂದಣಿಗೆ ಅರ್ಜಿ ಅಭಿಯಾನ:
ಈ ಬಾರಿ ರಾಜ್ಯದಲ್ಲಿ ಗರಿಷ್ಠ 50 ಕ್ವಿಂಟಲ್‌ವರೆಗೂ ರೈತರಿಂದ ರಾಗಿ ಖರೀದಿಗೆ ಅವಕಾಶ ನೀಡಲಾಗಿತ್ತು. ಇದರಿಂದ ಗರಿಷ್ಠ ಮಿತಿಯೂ ಬೇಗನೇ ತಲುಪಿದ್ದ ಕಾರಣ ರೈತರು ರಾಗಿಯನ್ನು ತಂದು ಎಪಿಎಂಸಿ ರಾಗಿ ಖರೀದಿ ಕೇಂದ್ರದಲ್ಲಿಕಾಯುತ್ತಾ ಕುಳಿತಿದ್ದಾರೆ.
ರೈತರಿಂದ ಒಂದು ಕ್ವಿಂಟಲ್ ರಾಗಿಗೆ ನಾಲ್ಕು ಕೆ ಜಿ ಯಷ್ಠು ಹೆಚ್ಚುವರಿಯಾಗಿ ರಾಗಿಯನ್ನು ಪಡೆಯುತ್ತಿರುವುದು ಸಾರ್ವಜನಿಕರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ಕ್ವಿಂಟಲ್ ಗೆ ಎರಡು ಕೆ ಜಿ ಗೋಣಿ ಚೀಲದ ತೂಕ ಎಂದು ಪರಿಗಣಿಸಲಾಗುತ್ತೆ ಅದರೆ ನಾಲ್ಕು ಕೆ ಜಿ ಪಡೆದಿದ್ದಾರೆ. ಎರಡು ಕೆಜಿ ವಾಪಾಸ್ ಕೊಡಿ ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತೆ ಎಂದು ರಾಜ್ಯ ರೈತ ಸಂಘಟನೆಯಿಂದ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ರೈತ ಮುಖಂಡರು ಮುತ್ತೆಗೌಡ, ಶಿರವಾರ ರವಿ,ತುರುವನಹಳ್ಳಿ ವಾಸುದೇವ್, ಮಜರ ಹೊಸಹಳ್ಳಿ ವಸಂತ ಕುಮಾರ್, ಸೇರಿದಂತೆ ಹಲವಾರು ರೈತ ಮುಖಂಡರು ಹಾಜರಿದ್ದರು.

