ರೋಗಿಗಳಿಗೆ ಹಣ್ಣು, ವೃದ್ದರಿಗೆ ಬಟ್ಟೆ ಮತ್ತು ಹೊದಿಕೆ ವಿತರಿಸಿದ ಬಿಜೆಪಿ ಮುಖಂಡ ಬಿಸಿ ಹನುಮಂತೇಗೌಡ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಬಿಜೆಪಿ ಮುಖಂಡ ಹಾಗೂ ಮಧುಗಿರಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಸಿ.ಹನುಮಂತೆಗೌಡ ತಮ್ಮ 35ನೇ ಜನ್ಮದಿನವನ್ನು ಕಬೀರಾನಂದಾಶ್ರಮದಲ್ಲಿನ ವೃದ್ದರಿಗೆ ಬಟ್ಟೆ ಮತ್ತು ಹೊದಿಕೆಗಳನ್ನು ವಿತರಿಸುವ ಮೂಲಕ ಸರಳವಾಗಿ ಆಚರಿಸಿಕೊಂಡರು.

ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳ ಆಶೀರ್ವಾದ ಪಡೆದ ಬಿ.ಸಿ.ಹನುಮಂತೆಗೌಡ ವೃದ್ದಾಶ್ರಮದಲ್ಲಿನ ವೃದ್ದರಿಗೆ ಪಂಚೆ, ವೃದ್ದೆಯರಿಗೆ ಸೀರೆ ಮತ್ತು ಹೊದಿಕೆಗಳನ್ನು ವಿತರಿಸಿದರು.

- Advertisement - 

ಸಹಜವಾಗಿ ಹುಟ್ಟುಹಬ್ಬವನ್ನು ಎಲ್ಲರೂ ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಾರೆ. ವೃದ್ದಾಶ್ರಮದಲ್ಲಿರುವವರಿಗೆ ಹೊದಿಕೆ, ವಸ್ತ್ರಗಳನ್ನು ವಿತರಿಸಿ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡಿರುವುದು ನನಗೆ ತೃಪ್ತಿಯಾಗಿದೆ ಎಂದು ಬಿಜೆಪಿ ಮುಖಂಡ ಹನುಮಂತೇಗೌಡ ಹೇಳಿದರು.

- Advertisement - 

ಇದೇ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿನ ರೋಗಿಗಳಿಗೂ ಹಣ್ಣುಗಳನ್ನು ವಿತರಿಸಿ ಶೀಘ್ರವೇ ಗುಣಮುಖರಾಗುವಂತೆ ಹಾರೈಸಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್, ವಕ್ತಾರ ನಾಗರಾಜ್‌ಬೇದ್ರೆ, ಗರುಢ ಕೇಸರಿಕುಮಾರ್, ವಸಂತಾಚಾರ್, ಕಿರಣ್, ತಿಪ್ಪೇಸ್ವಾಮಿ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

 

 

Share This Article
error: Content is protected !!
";