ಬೇವು ಬೆಲ್ಲದ ಬುತ್ತಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೇವು ಬೆಲ್ಲದ ಬುತ್ತಿ:

ನನ್ನವ್ವ ಅಪ್ಪನ ಶ್ರಮದ ಸೂರು
ಬಾದೆ ಹೊದಿಕೆ ಬಂದರಿಕೆ ನೆರಿಕೆ
ಮಣ್ಣ ಮೆದಿಕೆ ಬುಡ್ಡಿಯ ಬೆಳಕು

- Advertisement - 

ಬಾಗಿಲು ತಡಿಕೆ ತಗಡಿನ ಮುಚ್ಚಿಕೆ
ಚಿತ್ತಾರಗಳ ಕನಸವು ಹತ್ತಾರು
ಕಲಿಕೆಯಾಸೆ ಮುಗಿಲಾದವು ಅಕ್ಷರ

ಅನಾದಿ ಬೇರುಗಳ ಹಾದಿಯೇ ಬೆವರು
ದರ್ಪದೆದುರು ಹಸಿವ ಹೊದ್ದವರು
ಮಾರುಕಟ್ಟೆ ಸಂತೆಯ ಮಳಿಗೆಗಳಲಿ

- Advertisement - 

ಹೆತ್ತಾಗಿ ನೊಗಕೆ ಹೆಗಲಾದವರು
ತಳಕಾಳು ಕಸದಲಿ ತುತ್ತ ಹೆಕ್ಕಿದವರು
ಕಳೆದ ನೆನ್ನೆಯಲಿ ನಾಳೆಗಳು ಗೊತ್ತಿಲ್ಲ

ಉಸಿರು ಊಟ ಓಟ ಆ ಹೊತ್ತಿಗಷ್ಟೇ
ಚಿಂತೆಗೆ ನಿಲುಕದ ರೆಕ್ಕೆಗಳ ಬದುಕು
ಬೇಗೆಯ ಯುದ್ಧದಿ ಬಿದ್ದೆದ್ದವರು

ಸಾಲು ಸಾವೊಳಗೆ ಹಬ್ಬ ಉಂಡವರು
ಮರೆಯಲಿ ಹ್ಯಾಂಗ ನೆನಪಿನಂಗಳ
ನನ್ನ ಬಾಳ ಬುತ್ತಿ ಬೇವು ಬೆಲ್ಲದ ತೇರು
ಕವಿತೆ
:ಕುಮಾರ್ ಬಡಪ್ಪ

Share This Article
error: Content is protected !!
";