ಒಳ ಮೀಸಲಾತಿ ಅಡಿ ಖಾಲಿ ಹುದ್ದೆ ಕೂಡಲೆ ಭರ್ತಿ ಮಾಡಿ-ಕಾರಜೋಳ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಒಳ ಮೀಸಲಾತಿಗನುಗುಣವಾಗಿ ೫೬೪೩೨ ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಬೇಕು. ಇಲ್ಲವಾದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮ್ಯನವರನ್ನು ರಸ್ತೆಯಲ್ಲಿ ಓಡಾಡಲು ಬಿಡುವುದಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಎಚ್ಚರಿಸಿದರು.

ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಲಿತರು, ಶೋಷಿತರು, ಅಸ್ಪೃಶ್ಯರನ್ನು ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಮೇಲೆತ್ತಲು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರು ಮೀಸಲಾತಿ ಜಾರಿಗೆ ತಂದರು. ಮೂವತ್ತು ವರ್ಷಗಳಿಂದಲೂ ಒಳ ಮೀಸಲಾತಿ ಜಾರಿಗಾಗಿ ದಲಿತರು ಹೋರಾಟ ನಡೆಸುತ್ತಿದ್ದಾರೆ. ಜಸ್ಟಿಸ್ ನಾಗಮೋಹನ್‌ದಾಸ್ ವರದಿಯನ್ನು ಕಾಂಗ್ರೆಸ್ ಒಪ್ಪಲಿಲ್ಲ. ಬಸವರಾಜ್ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ

- Advertisement - 

ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಎಸ್ಸಿ.ಗಳಿಗೆ ಶೇ.೧೫ ರಿಂದ ೧೭, ಎಸ್ಟಿ.ಗಳಿಗೆ ಶೇ.೩ ರಿಂದ ೪ ಪರ್ಸೆಂಟ್ ಮೀಸಲಾತಿಯನ್ನು ಹೆಚ್ಚಿಸಿದರು. ಸಮಾಜ ಕಲ್ಯಾಣ ಮಂತ್ರಿ ಹೆಚ್.ಸಿ.ಮಹದೇವಪ್ಪ ದಲಿತ ಜನಾಂಗಕ್ಕೆ ಸೇರಿದ್ದರು ಮೀಸಲಾತಿ ಜಾರಿಗೆ ತರುವ ಬದ್ದತೆ ತೋರುತ್ತಿಲ್ಲ ಎಂದು ಕಿಡಿ ಕಾರಿದರು.

೬:೬:೫ ಅನುಪಾತದಂತೆ ಲಂಬಾಣಿ, ಭೋವಿ, ಕೊರಚ, ಕೊರಮ ಜನಾಂಗದವರು ಇರಬೇಕಾದ ಜಾಗದಲ್ಲಿ ೫೯ ಜಾತಿಗಳನ್ನು ಸೇರಿಸಿ ಶೇ.೭ ರಷ್ಟು ಮೀಸಲಾತಿಯನ್ನು ಕಡಿಮೆಗೊಳಿಸಿ ದಲಿತರಿಗೆ ಮೋಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ನಾಯಕ ಅಲ್ಲ. ವಿಶ್ವಾಸದ್ರೋಹಿ, ಕಪಟ ನಾಟಕದಿಂದ ಸರ್ಕಾರವನ್ನು ದಿವಾಳಿಯಾಗಿಸಿದ್ದಾರೆ. ಕೂಡಲೆ ಸರ್ವಪಕ್ಷ ಹಾಗೂ ೧೦೧ ಜಾತಿಗಳ ಮುಖಂಡರ ಸಭೆ ಕರೆದು ಚರ್ಚಿಸಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ಓಡಾಡುವುದು ಕಷ್ಟವಾಗುತ್ತದೆಂದು ಗಡುವು ನೀಡಿದರು.

- Advertisement - 

ರಾಜ್ಯದಲ್ಲಿರುವ ಪೌರ ಕಾರ್ಮಿಕರು ಕೆಲಸ ನಿಲ್ಲಿಸಿದರೆ ವಿಧಾನಸೌಧದಲ್ಲಿ ಕುಳಿತುಕೊಳ್ಳುವುದು ಕಷ್ಟವಾಗುತ್ತದೆ. ಅಲೆಮಾರಿಗಳು ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗದವರಲ್ಲಿ ಒಡಕು ಮೂಡಿಸುತ್ತಿದ್ದಾರೆ. ರಾಜ್ಯದಲ್ಲಿರುವುದು ಸಾಮಾಜಿಕ ನ್ಯಾಯದ ಸರ್ಕಾರವಲ್ಲ. ದಲಿತರನ್ನು ಓಟ್ ಬ್ಯಾಂಕ್ ಮಾಡಿಕೊಂಡು ರಾಜಕಾರಣ ಮಾಡುವುದನ್ನು ನಾವುಗಳು ಸಹಿಸಿಕೊಂಡಿರುವುದಿಲ್ಲವೆಂದು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಗೋವಿಂದ ಎಂ.ಕಾರಜೋಳ ತರಾಟೆ ತೆಗೆದುಕೊಂಡರು.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಟಿ.ಕುಮಾರಸ್ವಾಮಿ, ಮುಖಂಡ ಬಿ.ಸಿ.ಹನುಮಂತೆಗೌಡ, ಉಪಾಧ್ಯಕ್ಷ ಡಾ.ಸಿದ್ದಾರ್ಥ, ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್‌ಯಾದವ್, ಮೋಹನ್, ಜಿಲ್ಲಾ ವಕ್ತಾರ ನಾಗರಾಜ್‌ಬೇದ್ರೆ, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಎಸ್ಸಿ.ಮೋರ್ಚಾ ಅಧ್ಯಕ್ಷ ಪರಶುರಾಮ್, ಬಿಜೆಪಿ.ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಎ.ಮುರಳಿ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

 

 

Share This Article
error: Content is protected !!
";