ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೃಢ ಸಮಾಜದತ್ತ ಒಂದು ಹೆಜ್ಜೆ: ವಿಜಯಪುರದಲ್ಲಿ ಕರ್ನಾಟಕ ಪೊಲೀಸ್ ರನ್ 2026 ಕಾರ್ಯಕ್ರಮಕ್ಕೆ ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಚಾಲನೆ ನೀಡಿದರು.
ಫಿಟ್ನೆಸ್ ಫಾರ್ ಆಲ್ ಹಾಗೂ ಡ್ರಗ್ಸ್ ಮುಕ್ತ ಕರ್ನಾಟಕ ಗುರಿಯೊಂದಿಗೆ ರಾಜ್ಯ ಗೃಹ ಇಲಾಖೆಯ ವಿಜಯಪುರ ಜಿಲ್ಲಾ ಪೊಲೀಸ್ ಘಟಕ ಹಮ್ಮಿಕೊಂಡಿದ್ದ ‘ಕರ್ನಾಟಕ ಪೊಲೀಸ್ ರನ್ 5K ’ ಓಟದಲ್ಲಿ ಹೆಜ್ಜೆ ಹಾಕಿದ್ದು ಸಂತಸ ತರಿಸಿದೆ ಎಂದು ಸಚಿವರು ತಿಳಿಸಿದರು.
ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮ ಣನಿಂಬರಗಿ, ಜಿಲ್ಲಾಧಿಕಾರಿ ಕೆ.ಆನಂದ್, ಮಹಾನಗರ ಪಾಲಿಕೆ ಸದಸ್ಯರು, ವಿಜಯಪುರ ಸೈಕ್ಲಿಂಗ್ ಗ್ರೂಪ್ ನ ಸದಸ್ಯರು, ಸಹಸ್ರಾರು ಯುವಕರು, ಯುವತಿಯರು ಹಾಗೂ ಕಿಶೋರರು ಪಾಲ್ಗೊಂಡು ಓಟವನ್ನು ಯಶಸ್ವಿಗೊಳಿಸಿದರು.
ಈ ಓಟ ಕೇವಲ ದೈಹಿಕ ವ್ಯಾಯಾಮಕ್ಕೆ ಸೀಮಿತವಾಗದೆ, ವ್ಯಸನಮುಕ್ತ ಸಮಾಜದ ಜಾಗೃತಿಗಾಗಿ ಮೂಡಿಸಿದ ಗಟ್ಟಿ ಹೆಜ್ಜೆಯಾಗಿದೆ. ನಮ್ಮ ಯುವಶಕ್ತಿಯಲ್ಲಿ ಹೊಸ ಚೈತನ್ಯ ತುಂಬುವ ಇಂತಹ ಪ್ರಯತ್ನಗಳು ಸದೃಢ ಕರ್ನಾಟಕದ ಕನಸನ್ನು ನನಸು ಮಾಡಲಿವೆ. ಆರೋಗ್ಯವಂತ ಯುವಶಕ್ತಿ – ಡ್ರಗ್ಸ್ ಮುಕ್ತ ಕರ್ನಾಟಕ; ನಮ್ಮೆಲ್ಲರ ಗುರಿ ಈ ದಾರಿಯತ್ತ ಸಾಗಲಿ ಎಂದು ಸಚಿವರು ಆಶಿಸಿದರು.

