ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಹರಿಯಬ್ಬೆ ಗ್ರಾಮದ ಅಜ್ಜಿಕಟ್ಟೆ ಕೆರೆಗೆ ನೀರು ಪಂಪ್ ಮಾಡಲು ಹರಿಯಬ್ಬೆ ಗ್ರಾಮದ ಕುಂಚಿಟಿಗ ಸಮುದಾಯ ಭವನದ ನಿವೇಶನದ ಆವರಣದಲ್ಲಿ ಸಂಪ್ ನಿರ್ಮಿಸಿ ನೀರನ್ನು ಪಂಪ್ ಮಾಡುವ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಡಿ ಸುಧಾಕರ್ ಶಂಕು ಸ್ಥಾಪನೆ ನೆರವೇರಿಸಿದರು.
ಈ ಮಹತ್ವದ ಯೋಜನೆಯಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರ ದೊರಕಲಿದೆ. ಅಲ್ಲದೆ ಅಂತರ್ಜಲ ಮಟ್ಟ ವೃದ್ಧಿಗೂ ಅನುಕೂಲವಾಗಲಿದೆ ಎಂದು ಸಚಿವ ಸುಧಾಕರ್ ಹೇಳಿದರು.
ಕೆರೆಯ ನೀರನ್ನು ಸಂಗ್ರಹಿಸಲು ಸಂಪ್ ನಿರ್ಮಿಸಿ, ಸಂಪ್ ನಿಂದ ನೀರನ್ನು ಪಂಪ್ ಮಾಡಿ ಅಜ್ಜಿಕಟ್ಟೆ ಕೆರೆ ನೀರು ಪೂರೈಕೆ ಮಾಡುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಸಮರ್ಪಕ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.
ಗ್ರಾಮದ ಅಭಿವೃದ್ಧಿಯೇ ನಮ್ಮ ಆದ್ಯತೆ. ಜನರ ಮೂಲಭೂತ ಅಗತ್ಯಗಳನ್ನು ಪೂರೈಸುವ ದಿಸೆಯಲ್ಲಿ ಸರ್ಕಾರ ಬದ್ಧತೆಯಿಂದ ಕೆಲಸ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ವಿಕೆ ಗುಡ್ಡದ ಹಾಲಪ್ಪಯ್ಯಸ್ವಾಮಿ ಮಠದ ಎಂ.ವಿ ಚಂದ್ರಶೇಖರಯ್ಯ, ಡಾ.ಎಂ.ಜಿ ಗೋವಿಂದಯ್ಯ, ಕೆ.ಶಿವಲಿಂಗಯ್ಯ, ಖಂಡೇನಹಳ್ಳಿ ಲೋಕೇಶ್, ಮಾಜಿ ತಾಪಂ ಸದಸ್ಯ ಪಾಳ್ಯ ಚಂದ್ರಯ್ಯ, ಚಂದ್ರಕಾಂತ್, ಗುರುಮೂರ್ತಿ, ಶ್ರೀನಿವಾಸ್, ಹೆಚ್.ಡಿ ಹನುಮಂತರಾಯ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಈರಲಿಂಗೇಗೌಡರು ಭಾಗವಹಿಸಿದ್ದರು.

