ಚಂದ್ರ ಗ್ರಹಣದ ಪ್ರಯುಕ್ತ ಶ್ರೀ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಂದ್ರ ಗ್ರಹಣದ ಪ್ರಯುಕ್ತ ಚಿತ್ರದುರ್ಗದ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಇರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಭೀಮೇಶ್ವರ ದೇವಸ್ಥಾನ
, ಭೀಮಾಂಜನೇಯ ದೇವಸ್ಥಾನ, ಗಣಪತಿ ದೇವಸ್ಥಾನ, ಸುಬ್ರಹ್ಮಣ್ಯ ದೇವಸ್ಥಾನ, ವಿಷ್ಣು ದೇವಸ್ಥಾನ, ನವಗ್ರಹಗಳ ದೇವಸ್ಥಾನ ಹಾಗೂ ನಾಗರಕಟ್ಟೆ ದೇವಸ್ಥಾನ ಬೆಳಿಗ್ಗೆ ಯಥಾಪ್ರಕಾರ ಬಾಗಿಲು ತೆರೆದಿರುತ್ತದೆ.

ಸಂಜೆ ಏಳು ಗಂಟೆಯ ನಂತರ ದೇವಸ್ಥಾನದ ಶುದ್ದಿ ಕಾರ್ಯ ನಂತರ ಹಾಲಿನ  ಅಭಿಷೇಕ, ಹೂವಿನ ಅಲಂಕಾರ ಹಾಗೂ ಪೂಜೆಯ ವ್ಯವಸ್ಥೆ ಇರುತ್ತದೆ. ಸಂಜೆ ಒಂಬತ್ತು ಗಂಟೆಯವರೆಗೂ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಬಾಗಿಲು ತೆರೆದಿರುತ್ತದೆ. 

- Advertisement - 

ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಶರಣ್ ಕುಮಾರ್, ಉಪಾಧ್ಯಕ್ಷ ಮಲ್ಲಿಕಾರ್ಜುನ್, ಕಾರ್ಯದರ್ಶಿ ಎಂ ಪಿ ವೆಂಕಟೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement - 
Share This Article
error: Content is protected !!
";