ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು “ಎಕ್ಸ್ಫ್ಲೋರಿಂಗ್ ನೇಚರ್ಸ್ ಫಾರ್ಮಸಿ: ಪೊಟೆನ್ಶಿಯಲ್ಸ್ ಆಫ್ ಮೆಡಿಸಿನಲ್ ಅಂಡ್ ಆರೋಮೆಟಿಕ್ ಪ್ಲಾಂಟ್ಸ್ ಪಾರ್ ಹೆಲ್ತ್, ಲಿವಿಲಿಹುಡ್ಸ್, ಬಯೋ-ಎಕಾನಮಿ ಮತ್ತು ಕನ್ಸರ್ವೇಶನ್” ವಿಷಯದ ಮೇಲೆ 2026 ರ ಮಾರ್ಚ್ 24 ರಿಂದ 26ವರೆಗೆ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಅಕಾಡೆಮಿಯ ಕಛೇರಿಯಲ್ಲಿ ಆಯೋಜಿಸಲಾಗುತ್ತಿದೆ.
ಈ ಸಮ್ಮೇಳನದಲ್ಲಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಹೆಸರಾಂತ ವಿಜ್ಞಾನಿಗಳು ತಾಂತ್ರಿಕ ಉಪನ್ಯಾಸಗಳನ್ನು ನೀಡಲಿದ್ದಾರೆ. ಈ ಸಮ್ಮೇಳನದಲ್ಲಿ ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಯುವ ವಿಜ್ಞಾನಿಗಳು, ಯುವ ಉದ್ಯಮದಾರರು ಭಾಗವಹಿಸಬಹುದಾಗಿದೆ. ಅಲ್ಲದೇ, ಯುವ ವಿಜ್ಞಾನಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧವನ್ನು ಸಹ ಮಂಡಿಸಲು ಅವಕಾಶ ಕಲ್ಪಿಸಲಾಗಿದೆ. ಆಯ್ಕೆಯಾದ ಸಂಶೋಧನಾ ಪ್ರಬಂಧಕ್ಕೆ ನಗದು ಬಹುಮಾನವನ್ನು ನೀಡಲಾಗುವುದು.
ಆಸಕ್ತರು 2026 ರ ಮಾರ್ಚ್ 20 ರ ಒಳಗಾಗಿ ರಿಜಿಸ್ಟ್ರೇಶನ್ ಲಿಂಕ್ https://forms.gle/xn1ek2pwuBTXmNyz7 ಮೂಲಕ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ಅಧಿಕಾರಿಗಳ ಮೊ.ಸಂ.: 9620767819 / 9743084194 ಅಥವಾ ಅಕಾಡೆಮಿಯ ಜಾಲತಾಣ https://kstacademy.in ನಲ್ಲಿ ವೀಕ್ಷಿಸಬಹುದಾಗಿದೆ.
ವಿದ್ಯಾರ್ಥಿಗಳು, ಅಧ್ಯಾಪಕರು, ಈ ರಾಷ್ಟ್ರೀಯ ಸಮ್ಮೇಳನದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್ ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

