ಜನತಾ ಬಜಾರ್ ಅಧ್ಯಕ್ಷರ ರಾಜೀನಾಮೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಇಲ್ಲಿನ ಜನತಾ ಬಜಾರ್ ಆಡಳಿತ ಮಂಡಳಿಯ ಅವಧಿ ಇನ್ನು ಒಂದು ವರ್ಷ ಬಾಕಿ ಇರುವಾಗ ಹಾಲಿ ಅಧ್ಯಕ್ಷರಾಗಿದ್ದ ಕೆ.ಎ.ವೇಮಣ್ಣ ಅವರು ತಮ್ಮ ಸ್ಥಾನಕ್ಕೆ ನಿನ್ನೆ ರಾಜೀನಾಮೆ ನೀಡಿದ್ದಾರೆ.

ಈ ಮಧ್ಯೆ ಜನತಾ ಬಜಾರ್ ನ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಜಿ.ನೀಲಕಂಠಪ್ಪ ಅವರು ಸಹ ರಾಜೀನಾಮೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

- Advertisement - 

ರಾಜೀನಾಮೆ ಬಗ್ಗೆ ಮಾತನಾಡಿದ ವೇಮಣ್ಣ ಅವರು ಕಳೆದ ಒಂದು ವರ್ಷ ತಾವು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು. ಮತ್ತೊಬ್ಬರಿಗೆ ಅವಕಾಶ ನೀಡುವ ದೃಷ್ಟಿಯಿಂದ ರಾಜೀನಾಮೆ ನೀಡಿರುವುದಾಗಿ ತಿಳಿಸಿದರು.

ನೀಲಕಂಠಪ್ಪ ಅವರು ತಾವು ರಾಜೀನಾಮೆ ನೀಡಿರುವುದು ಸತ್ಯ. ಆದರೆ ಸಲ್ಲಿಸಿದ 14 ದಿನದೊಳಗೆ ಹಿಂದಕ್ಕೆ ಪಡೆಯಲು ಕಾನೂನಿನಲ್ಲಿ ಅವಕಾಶ ಇದೆ ಎಂದಿದ್ದಾರೆ.

- Advertisement - 

ಇನ್ನು ನಂತರ ಅಧ್ಯಕ್ಷರಾಗಲು ಪಲ್ಲೇದ ಮೈತ್ರಿ ಮತ್ತು ಕೇದಾರ ಅವರ ನಡುವೆ ಪೈಪೋಟಿ ಇದೆ. ಇವರಲ್ಲಿ ಯಾರು ಆಗುತ್ತಾರೆ. ನಗರದ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರ ಕೃಪಾ ಕಟಾಕ್ಷ ಯಾರ ಮೇಲಿದೆ. ಬರುವ ಒಂದು ವರ್ಷದ ಅವಧಿಯನ್ನು ಇಬ್ವರು ಹಂಚಿಕೊಳ್ಳುತ್ತಾರ, ಇವರಲ್ಲಿ ಯಾರು ಮೊದಲಿಗೆ ಅಧ್ಯಕ್ಷರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 

Share This Article
error: Content is protected !!
";