ಪದವಿ, ಸ್ನಾತಕೋತ್ತರ ಪದವಿ ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

News Desk
- Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರದ ಸುಂಕದಕಟ್ಟೆಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರವು 2025-26ನೇ ಶೈಕ್ಷಣಕ ಸಾಲಿನ ಜನವರಿ ಆವೃತ್ತಿಗೆ ವಿವಿಧ ಪದವಿ
, ಸ್ನಾತಕೋತ್ತರ ಪದವಿ ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳು ಬಿ.ಎ., ಬಿ.ಕಾಂ.,ಬಿ.ಎಸ್ಸಿ, ಬಿಎಸ್‍ಡಬ್ಲ್ಯೂ, ಬಿ.ಬಿ.ಎ, ಬಿಸಿಎ(ಜನರಲ್ ಮತ್ತು ಐಟಿ) ಪದವಿ ಕೋರ್ಸುಗಳು ಹಾಗೂ ಎಂ.ಎ ಎ.ಕಾಂ, ಎಂ.ಎಸ್ಸಿ., ಎಂಸಿಜೆ. ಎಂ.ಎಸ್.ಡಬ್ಲ್ಯು, ಎಂ.ಸಿ.ಎ, ಎಂ.ಬಿ.ಎ ಸೇರಿದಂತೆ ವಿವಿಧ ಸ್ನಾತಕೋತ್ತರ ಕೋರ್ಸುಗಳ ಪ್ರದೇಶಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

- Advertisement - 

ವಿಶ್ವವಿದ್ಯಾನಿಲಯದ ವೆಬ್ ಸೈಟ್ www.ksoumysuru.ac.in ನಲ್ಲಿ ಪ್ರವೇಶಕ್ಕೆ ಸಂಬಂಧಿಸಿದ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.

ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ, ಸೈನಿಕ, ಮಾಜಿ ಸೈನಿಕ, ಆಟೋ ಕ್ಯಾಬ್ ಚಾಲಕರ ಮಕ್ಕಳಿಗೆ, ಕೆಎಸ್‍ಆರ್‍ಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರಿಗೆ ಬೋಧನಾ ಶುಲ್ಕದಲ್ಲಿ ಶೇ.10%ರಷ್ಟು ರಿಯಾಯಿತಿ ಇರುತ್ತದೆ ಹಾಗೂ ಕೋವಿಡ್‍ನಿಂದ ಮೃತಪಟ್ಟಿ ಪೋಷಕರ ಮಕ್ಕಳು, ಲೈಂಗಿಕ ಅಲ್ಪಸಂಖ್ಯಾತರು, ದೃಷ್ಟಿದೋಷದ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ. ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ದಾಖಲೆಗಳನ್ನು ನೀಡಿದರೆ ಎಸ್‍ಎಸ್ ಪಿ ಮೂಲಕ ವಿದ್ಯಾರ್ಥಿವೇತನ ಪಡೆಯಬಹುದಾಗಿರುತ್ತದೆ.

- Advertisement - 

ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ನಿರ್ದೇಶಕರು, ಬೆಂಗಳೂರು ಪ್ರಾದೇಶಿಕ ಕೇಂದ್ರ-06, ನಂ.4 & 5, 1ನೇ ಮಹಡಿ, ಶ್ರೀ ಲಕ್ಷ್ಮಿ ಕಾಲೇಜ್ ಆಫ್ ಸೈನ್ಸ್ & ಮ್ಯಾನೇಜ್‍ಮೆಂಟ್ ಆವರಣ ಶ್ರೀಗಂಧಕಾವಲ್, ಮಾಗಡಿ ಮುಖ್ಯ ರಸ್ತೆ, ಸುಂಕದಕಟ್ಟೆ, ಬೆಂಗಳೂರು-560091 ಅಥವಾ ಮೊಬೈಲ್ ಸಂಖ್ಯೆ:  9632332265, 9741197921, 9380554929 ಅಥವಾ ಇ-ಮೇಲ್ ksoubengalurure06@gmail.com ಗೆ ಸಂರ್ಕಿಸಬಹುದಾಗಿದೆ ಎಂದು ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಶಶಿಕಲಾ.ಜೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
error: Content is protected !!
";