ಫೋನ್ ಟ್ಯಾಪಿಂಗ್ ಕದನ ಶುರು

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ರಾಜ್ಯ ರಾಜಕಾರಣದಲ್ಲಿ ಫೋನ್ ಟ್ಯಾಪಿಂಗ್ ಕದನ ಶುರುವಾಗಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮೊದಲು ಫೋನ್ ಟ್ಯಾಪಿಂಗ್ ಅರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸಿಎಂ ಪ್ರತಿಕ್ರಿಯಿಸಿ ನಮ್ಮದು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಹಾಲು-ಜೇನಿನ ಸಂಬಂಧವಿದೆ ಎಂದು ಹೇಳುವ ಮೂಲಕ ಎದುರಾಳಿಗಳಿಗೆ ತಿರುಗೇಟು ನೀಡಿದ್ದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ಅವರು ನಾವು ಮಾಡ್ತಿಲ್ಲ ಎಂದು ಗೃಹ ಸಚಿವರು ನಿರಾಕರಿಸಿಲ್ಲ. ಯಾರದ್ದು ಮಾಡ್ತಿದ್ದಾರೆ ಪೋನ್ ಕದ್ದಾಲಿಕೆಯನ್ನು ವಿರೋಧ ಪಕ್ಷದವರದು ಮಾಡ್ತಿದ್ದಾರಾ? ಅಥವಾ ಡಿ ಕೆ‌ಶಿವಕುಮಾರ್ ಅವರದು ಮಾಡ್ತಿದ್ದಾರೆ? ಈ ಬಗ್ಗೆ ಮೊದಲು ನ್ಯಾಯಾಂಗ ತನಿಖೆಯಾಗಲಿ ಎಂದಿದ್ದಾರೆ. ಅಲ್ಲದೇ ನಿಮ್ಮದು ಹಾಲು ಜೇನು ಅಲ್ಲ ಆಲ್ಕೋಹಾಲ್ ಜೇನು ಇರಬೇಕೆಂದು ಸಿಎಂ ಸಿದ್ದರಾಮಯ್ಯಗೆ ಜೋಶಿ ಟಾಂಗ್ ನೀಡಿದ್ದಾರೆ.

- Advertisement - 

 

 

- Advertisement - 

Share This Article
error: Content is protected !!
";