ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) 92ನೇ ಸರ್ವ ಸದಸ್ಯರ ಮಹಾಸಭೆಯು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 29ರಂದು ಬೆಳಿಗ್ಗೆ 9.45ಕ್ಕೆ ಝೀರಾ ಕನ್ವೇಷನಲ್ ಹಾಲ್, ನಾವದಗೇರಿ, ಜನವಾಡ ರಸ್ತೆ, ಬೀದರ -585401 ಇಲ್ಲಿ ನಡೆಯಲಿದೆ.
ಸಂಘದ ಸದಸ್ಯರುಗಳು ಮಹಾಸಭೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

