ಅವಹೇಳನಕಾರಿ ಪೋಸ್ಟ್ ಹಾಕಿದ ಪ್ರಕರಣ ಡಿಕೆ ಶಿವಕುಮಾರ್ ಗೆ ನಿರಾಳ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾನು ಕರಸೇವಕ, ನನ್ನನ್ನೂ ಬಂಧಿಸಿ ಅಭಿಯಾನದ ಪೋಸ್ಟರ್​​ನ್ನು ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ವಿರುದ್ಧದ ಎಫ್​​ಐಆರ್​​ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಗುರುವಾರ ಆದೇಶ ಹೊರಡಿಸಿದ್ದು ಈ ಮೂಲಕ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ದೊಡ್ಡ ಮಟ್ಟಜ ನಿರಾಳ ಸಿಕ್ಕಿದೆ.

ಎಫ್ಐಆರ್ ಗೆ ತಡೆ:
ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಅರ್ಜಿ ವಿಚಾರಣೆ ಮಾಡಿದ್ದು, ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್​ಗೂ ಎಕ್ಸ್​​ನ ಪೋಸ್ಟ್​​​ಗೂ ಸಂಬಂಧವಿಲ್ಲವೆಂದು ಡಿಕೆ ಶಿವಕುಮಾರ್​ ಪರ ವಕೀಲ ಹೆಚ್.ವಿ.ಪ್ರವೀಣ್ ಗೌಡ ವಾದಿಸಿದ್ದಾರೆ. ವಿಚಾರಣೆ ಬಳಿಕ ಡಿ.ಕೆ.ಶಿವಕುಮಾರ್ ವಿರುದ್ಧದ ಎಫ್ಐಆರ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

- Advertisement - 

ಪ್ರಕರಣದ ಹಿನ್ನೆಲೆ:
ಹುಬ್ಬಳ್ಳಿಯಲ್ಲಿ
1992ರಲ್ಲಿ ನಡೆದ ರಾಮ ಜನ್ಮಭೂಮಿ ಕುರಿತ ಹೋರಾಟದಲ್ಲಿ ಭಾಗಿಯಾಗಿದ್ದ ಕರಸೇವಕ ಶ್ರೀಕಾಂತ ಪೂಜಾರಿಯನ್ನು 31 ವರ್ಷಗಳ ಬಳಿಕ ಅಂದರೆ ರಾಮ ಮಂದಿರ ಉದ್ಘಾಟನೆಗೆ ಸಮಯದಲ್ಲಿ ಕಾಂಗ್ರೆಸ್‌ಸರ್ಕಾರ ಬಂಧಿಸಿ ಜೈಲಿಗಟ್ಟಿತ್ತು. ಕಾಂಗ್ರೆಸ್​ ಸರ್ಕಾರ ಉದ್ದೇಶ ಪೂರ್ವಕವಾಗಿ ಬಂಧಿಸಿದ್ದಾರೆ. ಹೀಗಾಗಿ ಇದನ್ನು ಖಂಡಿಸಿ ಬಿಜೆಪಿ ನಾಯಕರು ನಾನೂ ಕರಸೇವಕ, ನನ್ನನ್ನೂ ಬಂಧಿಸಿ ಎಂದು ವಿಭಿನ್ನ ಅಭಿಯಾನ ಮಾಡಿದ್ದರು.

ಇದನ್ನು ಡಿಕೆ ಶಿವಕುಮಾರ್​​ ಸೇರಿದಂತೆ ಕಾಂಗ್ರೆಸ್​​ ನಾಯಕರು ತಿರುಚಿ ಪೋಸ್ಟರ್​​ಗಳನ್ನು ಹಾಕಿದ್ದರು.ಕಾಂಗ್ರೆಸ್​​ ತಿರುಚಿದ ಪೋಸ್ಟರ್​​ಗಳು ಫೋರ್ಜರಿ ಮತ್ತು ಎರಡು ಗುಂಪುಗಳ‌ನಡುವೆ ದ್ವೇಷ ಮೂಡಿಸಿದ ಆರೋಪ ಹಿನ್ನೆಲೆ ದೂರು ದಾಖಲಾಗಿತ್ತು. ಬಿಜೆಪಿ ಕಾನೂನು ಪ್ರಕೋಷ್ಠ ಮಾಜಿ ಸಂಚಾಲಕ ಯೋಗೇಂದ್ರ ಹೊಡಘಟ್ಟ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ಖಾಸಗಿ ದೂರು ಸಲ್ಲಿಸಿದ್ದರು. ದೂರು ಆಧರಿಸಿ ಹೈಗ್ರೌಂಡ ಪೊಲೀಸರು ಡಿಸಿಎಂ ಡಿಕೆ ಶಿವಕುಮಾರ್​​ ಮತ್ತು ಬಿಆರ್​ ನಾಯ್ಡು ವಿರುದ್ಧ ಎಫ್​ಐಆರ್​​ ದಾಖಲಾಗಿತ್ತು. ಅರ್ಜಿ ಪರಿಶೀಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತನಿಖೆಗೆ ಆದೇಶಿಸಿತ್ತು.

- Advertisement - 

 

Share This Article
error: Content is protected !!
";