ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು ಶಿಸ್ತು ಪಾಲಿಸುವುದು, ಚಾಲಕ/ಸಹಾಯಕರೊಂದಿಗೆ ಸೌಜನ್ಯದಿಂದ ವರ್ತಿಸುವುದು ಮತ್ತು ವಾಹನದಲ್ಲಿ ಸ್ವಚ್ಛತೆ ಕಾಪಾಡುವುದು ಬಹು ಮುಖ್ಯ. ಸುರಕ್ಷತೆಗಾಗಿ ಕಿಟಕಿಗಳಿಂದ ಕೈ-ತಲೆ ಹೊರ ಹಾಕಬಾರದು, ನಿಂತು ಪ್ರಯಾಣಿಸಬಾರದು ಮತ್ತು ಚಾಲಕನ ಸೂಚನೆ ಪಾಲಿಸಬೇಕು.
ಅದರೆ ಸುರಕ್ಷಾ ನಿಯಮವನ್ನು ಗಾಳಿಗೆ ತೂರಿ ಬಸ್ಸಿನ ಬಾಗಿಲಲ್ಲಿ ಜೋತು ಬೀಳುತ್ತಿದ್ದರೂ ಚಾಲಕರು ನಿರ್ವಾಹಕರು ಇದರ ಕಡೆ ಗಮನ ಹರಿಸದೆ ವಾಹನ ಚಲಾಯಿಸುತ್ತಿರುವುದು ಹಲವಾರು ಸಂದರ್ಭಗಳಲ್ಲಿ ಕಾಣುವ ದೃಶ್ಯ.
ಇನ್ನಾದರು ಚಾಲಕ/ನಿರ್ವಾಹಕ ಸುರಕ್ಷಾ ನಿಯಮವನ್ನು ಪಾಲಿಸಿ ಹಾಗು ಪ್ರಯಾಣಿಕರು ಹಾಗು ವಿದ್ಯಾರ್ಥಿಗಳು ಇಂತಹ ಸಾಹಸಕ್ಕೆ ಹೋಗದೆ ಸುರಕ್ಷಾ ಸಾರಿಗೆ ಸಂಸ್ಥೆಯ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕಿದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.

