ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಲ್ಪಸಂಖ್ಯಾತರ ಶಾಲೆಗಳನ್ನು ಕೆಪಿಎಸ್‌ಮಾದರಿಯಲ್ಲಿ ಉನ್ನತೀಕರಣಕ್ಕೆ 1000 ಕೋಟಿ ರೂ. ಅಲ್ಪಸಂಖ್ಯಾತರ ವಸತಿ ಶಾಲೆಗಳ ಆರಂಭಕ್ಕೆ ವಿಧಾನ ಪರಿಷತ್ ಶಾಸಕ, ಬಿಜೆಪಿ ನಾಯಕ ಸಿ.ಟಿ ರವಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ ಅಲ್ಪಸಂಖ್ಯಾತ ಕಾಲೋನಿಗಳ ಮೂಲಸೌಕರ್ಯಕ್ಕೆ ನೂರಾರು ಕೋಟಿ ಮೀಸಲು ಅಲ್ಪಸಂಖ್ಯಾಂತ ನಿರ್ಗತಿಕರಿಗೆ ಎರಡು ವೃದ್ಧಾಶ್ರಮ ಆರಂಭ ಅಲ್ಪಸಂಖ್ಯಾಂತ ನಿರುದ್ಯೋಗಿಗಳಿಗೆ 3 ಲಕ್ಷ ರೂ. ವರೆಗೆ ಸಹಾಯಧನ ಅಲ್ಪಸಂಖ್ಯಾತ ಮಹಿಳೆಯರ ಸ್ವ-ಉದ್ಯೋಗ ಪ್ರೋತ್ಸಾಹಕ್ಕೆ ಸೊಸೈಟಿ ಸ್ಥಾಪನೆಗೂ ರವಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ-ಕಲಬುರಗಿಯಲ್ಲಿ ಹಜ್‌ಭವನ ನಿರ್ಮಾಣ ಅಲ್ಪಸಂಖ್ಯಾತ ನಿಗಮದ ಸಾಲದ ಬಡ್ಡಿ ಮನ್ನಾ ಅಲ್ಪಸಂಖ್ಯಾತ ಉದ್ಯೋಗಸ್ಥ ಮಹಿಳೆಯರಿಗೆ 4 ಹಾಸ್ಟೆಲ್ ಅಲ್ಪಸಂಖ್ಯಾತ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಖರೀದಿಗೆ 50 ಸಾವಿರ ವಕ್ಫ್‌ಆಸ್ತಿ ಅಭಿವೃದ್ಧಿಗೆ ಹಣ ಮೀಸಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಕರ್ನಾಟಕದ ಬಜೆಟ್ ಅನ್ನುವುದಕ್ಕಿಂತಲೂ, ಒಂದು ಸಮುದಾಯದ ಬಜೆಟ್ ಎನ್ನುವಂತೆ ಕಾಣುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ದಲಿತ, ಹಿಂದುಳಿದ ಸಮುದಾಯಗಳ ನಿಗಮಗಳಿಗೆ ಕೊಡಲು ಸರ್ಕಾರದ ಕೈಯಲ್ಲಿ ಬಿಡಿಗಾಸೂ ಇಲ್ಲ. ಹೀಗಿರುವಾಗ, ಅಲ್ಪಸಂಖ್ಯಾತ ಅಭಿವೃದ್ಧಿಗೆ ಎಲ್ಲಿಂದ ಇಷ್ಟೊಂದು ಹಣ ಬಂತು? ದಲಿತರು, ಹಿಂದುಳಿದವರ ಓಟ್ ಬೇಕು, ಆದರೆ, ಅವರು ಅಭಿವೃದ್ಧಿ ಕೇಳಬಾರದು ಎನ್ನುವುದು ಕರ್ನಾಟಕ ಕಾಂಗ್ರೆಸ್ ಪಕ್ಷದ ಧೋರಣೆ ಎಂದು ಸಿ.ಟಿ ರವಿ ಹರಿಹಾಯ್ದಿದ್ದಾರೆ.
2023-24 ನೇ ಸಾಲಿನಲ್ಲಿ 11,144 ಕೋಟಿ, 2024-25ನೇ ಸಾಲಿನಲ್ಲಿ 14,282 ಕೋಟಿ, 2025-26 ನೇ ಸಾಲಿನಲ್ಲಿ 13,433 ಕೋಟಿ ರೂಪಾಯಿ ಅಂದರೆ ಒಟ್ಟು 38,859 ಕೋಟಿ ದುರ್ಬಳಕೆಯಾಗಿದೆ. ದಲಿತ ಮೀಸಲು ನಿಧಿಯ ಹಣವನ್ನು ಗ್ಯಾರಂಟಿಗಾಗಿ ಕತ್ತರಿಸುವುದು ಯಾವ ನ್ಯಾಯ..? ಎಂದು ಬಿಜೆಪಿ ನಾಯಕ ರವಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

