ವಸತಿ ಶಾಲೆಗಳಲ್ಲಿ ಕಳಪೆ ಗುಣಮಟ್ಟದ ಆಹಾರ ವಿತರಣೆ; ಸಿದ್ದೇಶ್ ದೂರು ಸಲ್ಲಿಕೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಜಿಲ್ಲೆಯ  ಸಿರುಗುಪ್ಪ ತಾಲ್ಲೂಕು
, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಿಕ್ಷಣ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಆಹಾರ ಹಾಗೂ ಮೂಲಭೂತ ಸೌಕರ್ಯ ಒದಗಿಸುವಲ್ಲಿ ವಸತಿ ಶಾಲೆಯ ಪ್ರಿನ್ಸಿಪಲ್  ಕರ್ತವ್ಯಲೋಪ ವೆಸಗಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಸಿದ್ದೇಶ್ ಪರಿಶಿಷ್ಟ ಪಂಗಡಗಳ ಜಿಲ್ಲಾ ಕಲ್ಯಾಣ ಅಧಿಕಾರಿಗಳಿಗೆ ದೂರು ಸಲ್ಲಿಸಿದರು.

 ಈ ಕುರಿತು ಕನ್ನಡ ದಿನಪತ್ರಿಕೆಗಳ ವರದಿ ಮತ್ತು ಸರ್ಕಾರದ ಆದೇಶವನ್ನು ಉಲ್ಲೇಖಿಸಿರುವ ಸಿದ್ದೇಶ್, ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲ್ಲೂಕು, ಹಚ್ಚೊಳ್ಳಿ ಗ್ರಾಮದ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಿಕ್ಷಣ ಶಾಲೆಯಲ್ಲಿ ಪತ್ರಿಕೆಯಲ್ಲಿ ಪ್ರಕಟಗೊಂಡಂತೆ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಆಹಾರ, ಹುಳ ಬಿದ್ದ ಆಹಾರ ಪದಾರ್ಥಗಳು  ಬೂಜು  ಹಿಡಿದ ತಕರಾರಿ ಪದಾರ್ಥಗಳನ್ನು ವಿತರಣೆ ಮಾಡಿರುತ್ತಾರೆ,

- Advertisement - 

ಇದು ವಸತಿ ಶಾಲೆಗಳ ಶೋಚನೆಯ ಪರಿಸ್ಥಿತಿ ಆಗಿದೆ, ಇಂತಹ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಬಡ ಪ್ರತಿಭಾವಂತಹ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿದ್ದೇಶ್, ಹಚ್ಚೊಳ್ಳಿ ವಸತಿ ಶಿಕ್ಷಣ ಶಾಲೆಯಲ್ಲಿ, ಪ್ರಾಂಶುಪಾಲರ ಹಾಗೂ ನಿಲಯ ಪಾಲಕರ ಮೇಲೆ  ಕೆಸಿಎಸ್ ಆರ್ ನಿಯಮದ ಪ್ರಕಾರ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

 ವಸತಿ ಶಾಲೆಯಲ್ಲಿ ಕಳಪೆ ಗುಣಮಟ್ಟದ ಆಹಾರ ಹಾಗೂ ಸಂಪೂರ್ಣ ನೈರ್ಮಲ್ಯ ಹದ್ದೆಗಟ್ಟಿರುವುದು ಹಾಗೂ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಪ್ರಾಂಶುಪಾಲರು ಹಾಗೂ ನಿಲಯ ಪಾಲಕರು ತಮ್ಮ ಕರ್ತವ್ಯಲೋಪ ಮತ್ತು ಬೇಜಾಬ್ದಾರಿತನ ದೂರಿರುವುದು  ಕಂಡು ಬಂದಿರುತ್ತದೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಜೀವನದಲ್ಲಿ ಅಧಿಕಾರಿಗಳು ಆಟವಾಡುವುದು ಸಂಮಜಶವಲ್ಲ.

- Advertisement - 

ಆದ್ದರಿಂದ ಈ ಕೂಡಲೇ ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ನಿಲಯ ಪಾಲಕರು ನಿಯಮಾನುಸಾರ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಈ ವಿಷಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೆ ಹೋದಲ್ಲಿ  ಮುಂದಿನ ದಿನಗಳಲ್ಲಿ  ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

 

 

 

Share This Article
error: Content is protected !!
";