ಬೆಳವಾಡಿ ಪ್ರತಿಷ್ಠಾನ ಸ್ಥಾಪನೆಗೆ ವಚನಾನಂದ ಶ್ರೀ ಹರ್ಷ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹರಿಹರ :
ಬೆಳವಡಿ ರಾಣಿ ಮಲ್ಲಮ್ಮ  ಸ್ಮರಣಾರ್ಥ  ಆಯವ್ಯಯದಲ್ಲಿ
ಬೆಳವಡಿ ರಾಣಿ ಮಲ್ಲಮ್ಮ ಪ್ರತಿಷ್ಠಾನಘೋಷಣೆ ಮಾಡಿರುವುದು ನಿಜಕ್ಕೂ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಹರಿಹರ ಪಂಚಮಸಾಲಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

ಈ ಮಹತ್ವದ ನಿರ್ಧಾರ ಕೈಗೊಂಡಿದ್ದಕ್ಕಾಗಿ  ಮುಖ್ಯಮಂತ್ರಿ  ಸಿದ್ದರಾಮಯ್ಯನವರಿಗೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅತ್ಯಂತ ಮುತುವರ್ಜಿ ಶ್ರಮಿಸಿದ ಬೈಲಹೊಂಗಲದ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಅರ್ಪಿಸುವುದಾಗಿ ಸ್ವಾಮೀಜಿ ತಿಳಿಸಿದ್ದಾರೆ.

- Advertisement - 

ಪ್ರತಿಷ್ಟಾನ ಸ್ಥಾಪನೆಯಿಂದ ಬೆಳವಡಿ ರಾಣಿ ಮಲ್ಲಮ್ಮನ ಪರಾಕ್ರಮ ಮತ್ತು ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಹೆಜ್ಜೆ ಇದಾಗಿದೆ ಎಂದು ವಚನಾನಂದ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದ್ದಾರೆ.

 

- Advertisement - 

Share This Article
error: Content is protected !!
";