ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಅಹಿಂದ ನಾಯಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿರುವ ಹದಿನೇಳನೆ ಬಜೆಟ್ ಸರ್ವಸ್ಪರ್ಶಿ, ಸಮತೋಲಿತವಾಗಿದೆ. ರೋಗ ಬಾಧಿತ ಬೆಳೆಗಳ ರಕ್ಷಣೆಗೆ ಸಸ್ಯ ಸಂಜೀವಿನಿ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಬಬ್ಬೂರಿನಲ್ಲಿ ಕೃಷಿ ಉದ್ದಿಮೆ ತರಬೇತಿ, ತೋಟಗಾರಿಕೆ ಉತ್ಪನ್ನಗಳ ಸಂರಕ್ಷಣೆಗೆ ಶೀಥಲಗೃಹ ಮೂಲಕ ಅನ್ನದಾತ ರೈತನ ಅಭ್ಯುದಯಕ್ಕೆ ಒತ್ತು ಕೊಡಲಾಗಿದೆ.
ಅಲ್ಪಸಂಖ್ಯಾತ ಯುವತಿಯರಿಗೆ ಆರ್ಥಿಕ ನೆರವು. ಆರೋಗ್ಯ ವಲಯಕ್ಕೆ ಬಜೆಟ್ನಲ್ಲಿ ಬಂಪರ್. ಶಕ್ತಿ ಯೋಜನೆಗೆ ಐದು ಸಾವಿರದ ಮುನ್ನೂರು ಕೋಟಿ ರೂ. ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ. ಅಕ್ಕಿ ಬದಲಿಗೆ ಇಂದಿರಾ ಕಿಟ್. ರೈತರಿಗೆ, ಜನಸಾಮಾನ್ಯರಿಗೆ ಇದೊಂದು ಅನುಕೂಲಕರವಾಗಿರುವ ಬಜೆಟ್. ಮುನಿರಾ ಎ.ಮಕಾಂದಾರ್, ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಚಿತ್ರದುರ್ಗ.

