ವೈರಾಗ್ಯ ನಿಧಿ-ಡಾ.ಗೌರಮ್ಮ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವೈರಾಗ್ಯ ನಿಧಿ

ಉಡುತಡಿಯಲಿ ಜನಿಸಿ ಬಾಲ್ಯದಿ ಶಿವನ ಆರಾಧಿಸಿ
ಚೆನ್ನಮಲ್ಲಿಕಾರ್ಜುನನ ಪತಿಯೆಂದು ಸ್ವೀಕರಿಸಿ
ಕೇಶಾಂಬರಿಯಾಗಿ ಲೌಕಿಕ ಜಗವ ದಿಕ್ಕರಿಸಿ
ಹೊರಟಳು ಅಲೆಯುತ ಪರಶಿವನ ಬಯಸಿ

- Advertisement - 

ಪ್ರಸಿದ್ದಿ ಪಡೆದಳು ಶ್ರೇಷ್ಠ ವಚನಗಾರ್ತಿಯಾಗಿ
ಬಂಡಾಯದ ದನಿಯೆತ್ತಿದಳು ಸ್ತ್ರೀಯರಿಗಾಗಿ
ನೆಡೆದಳು ಅನುಭವ ಮಂಟಪಕೆ ದಿಗಂಬರಳಾಗಿ
ಶಿವ ಶರಣರ ಮೆಚ್ಚುಗೆ ಪಡೆದಳು ಅಕ್ಕರೆಯ ಅಕ್ಕಳಾಗಿ 

ಮೊದಲ ಕವಯತ್ರಿಯಿವಳು ಕನ್ನಡ ಸಾಹಿತ್ಯಕೆ
ಏರಿದಳು ಆತ್ಮ ಬಲದಿಂದ ಆಧ್ಯಾತ್ಮದ ಉತ್ತುಂಗಕೆ
ವೀರ ವಿರಾಗಿಣಿಯಾಗಿ ಅರಿಷಡ್ವರ್ಗಗಳ ಜಯಿಸಿದಾಕೆ
ಸಾಕಾರಮೂರ್ತಿಯಿವಳು ನಿಷ್ಠೆ ಭಕ್ತಿ ವೈರಾಗ್ಯಕೆ

- Advertisement - 

ತೆರಳಿದಳು ಶ್ರೀಶೈಲಕೆ ತನ್ನ ಆರಾಧ್ಯ ಪತಿಯ ಅರಸುತ
ಉಗ್ರಸಾದನೆಯಲಿ ತಲ್ಲಿನನಾದಳಾಕೆ ಹರನ ಜಪಿಸುತ
ಕದಳಿವನದಲಿ ಬಯಲಾದಳು ತನ್ನ ಪತಿಯ ಸೇರುತ
ಮನವಾಗಿದೆ ಭಾವುಕ ವೈರಾಗ್ಯ ನಿಧಿಯ ನೆನೆಯುತ

ಕವಿತೆ: ಡಾ.ಆರ್. ಗೌರಮ್ಮ, ಚಿತ್ರದುರ್ಗ.

 

Share This Article
error: Content is protected !!
";