ಜಿಲ್ಲಾಸ್ಪತ್ರೆಯಲ್ಲಿ ಉಚಿತ ಮೂತ್ರಕೋಶ ತಪಾಸಣೆ ಶಿಬಿರ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಮತ್ತು ದಾವಣಗೆರೆಯ ಎಸ್.ಎಸ್.ನಾರಾಯಣ ಹೆಲ್ತ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಆಸ್ಪತ್ರೆಯ ಕೊಠಡಿ ಸಂಖ್ಯೆ 15ರಲ್ಲಿ
ಪ್ರತಿ ತಿಂಗಳ ಎರಡನೇ ಗುರುವಾರ ಉಚಿತ ಮೂತ್ರಕೋಶ ತಪಾಸಣಾ ಶಿಬಿರನಡೆಯಲಿದೆ.

ಎಸ್.ಎಸ್.ನಾರಾಯಣ ಹೆಲ್ತ್ ಆಸ್ಪತ್ರೆಯ ಮೂತ್ರಕೋಶ ತಜ್ಞ ವೈದ್ಯರಾದ (ಯುರಾಲಾಜಿಸ್ಟ್) ಡಾ.ಯು.ಎಸ್.ಕಾರ್ತಿಕ್ ಅವರು ಅಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವೆಗೆ ಶಿಬಿರದಲ್ಲಿ ಲಭ್ಯವಿದ್ದು, ಮೂತ್ರಕೋಶ ತಪಾಸಣೆ ನಡೆಸುವರು.

- Advertisement - 

ಮೂತ್ರಪಿಂಡದಲ್ಲಿ ಕಲ್ಲು, ಹರಳು (ಕಿಡ್ನಿಸ್ಟೋನ್), ಪದೇ ಪದೇ ಮೂತ್ರ ವಿಸರ್ಜನೆ, ಪ್ರೋಸ್ಟೇಟ್‍ನ ಮೂತ್ರದ ತೊಂದರೆ, ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಮೂತ್ರದಲ್ಲಿ ಸೋಂಕು, ಉರಿ ಮೂತ್ರ, ಮೂತ್ರದಲ್ಲಿ ರಕ್ತ ಕಾಣಿಸುವುದು, ಪುರುಷರ ಬಂಜೆತನ, ಚಿಕ್ಕ ಮಕ್ಕಳ ಮೂತ್ರದ ತೊಂದರೆಗಳು, ತಡೆದ ಮೂತ್ರ ಇತ್ಯಾದಿ ಮೂತ್ರಕೋಶ ಕಾಯಿಲೆಯ ಲಕ್ಷಣಗಳು ಕಂಡುಬಂದರೆ ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ 9535025743, 7259759982 ಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ  ಡಾ.ಎಸ್.ಪಿ.ರವೀಂದ್ರ ತಿಳಿಸಿದ್ದಾರೆ.

- Advertisement - 

 

Share This Article
error: Content is protected !!
";