ಮೌಂಟ್ ಎವರೆಸ್ಟ್‌ ಏರುವ ತಂಡಕ್ಕೆ ಶುಭ ಕೋರಿದ ಸಿಎಂ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಏಪ್ರಿಲ್
, ಮೇ ತಿಂಗಳಲ್ಲಿ ಮೌಂಟ್ ಎವರೆಸ್ಟ್‌ನ್ನು ಏರಲು ಸಿದ್ಧರಾಗಿರುವ ಕರ್ನಾಟಕ ಪರ್ವತಾರೋಹಣ ಸಂಘದ ಸದಸ್ಯರಾದ ಸಂತೋಷ್ ದೇವರಾಜಪ್ಪ ಮತ್ತು ಮಹಿಳಾ ಪರ್ವತಾರೋಹಿ ಪ್ರೊ. ಡಾ. ಚಿನ್ಮಯಿ ತ್ರಿಶೂಲಮೂರ್ತಿ ಅವರು ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು.

ಮುಖ್ಯಮಂತ್ರಿಗಳು ತಂಡಕ್ಕೆ ರಾಷ್ಟ್ರೀಯ ತ್ರಿವರ್ಣ ಧ್ವಜ, ಕರ್ನಾಟಕ ರಾಜ್ಯ ಲಾಂಛನ ಮತ್ತು ಕನ್ನಡ ಧ್ವಜ ಹಸ್ತಾಂತರಿಸಿ ಶುಭ ಕೋರಿದರು.

- Advertisement - 

ಈ ಸಂದರ್ಭದಲ್ಲಿ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಕರ್ನಾಟಕ ಪರ್ವತಾರೋಹಣ ಸಂಘದ ಕಾರ್ಯದರ್ಶಿ ನಾಗೇಂದ್ರ ಕುಮಾರ್.ಆರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement - 
Share This Article
error: Content is protected !!
";