ವೀರಗಾಸೆ ಯುವ ಪ್ರತಿಭೆ ಪುನೀತ್ ಕುಮಾರ್ ಗೆ ಕರುನಾಡ ಪದ್ಮಶ್ರೀ ಪ್ರಶಸ್ತಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಗೋವಾ ಕನ್ನಡಿಗರ  ಸಾಂಸ್ಕೃತಿಕ ಸಮ್ಮೇಳನದಲ್ಲಿ ಅಂಗವಾಗಿ ಅಲ್ಲಿನ ಅನಿವಾಸಿ ಕನ್ನಡಿಗರು ಜಾನಪದ ಕಲೆಗಳಲ್ಲಿ ಪರಿಣಿತ ರಾದವರನ್ನು ಗುರುತಿಸಿ ಅಂತಹ ಕಲಾವಿದರನ್ನು ಗೌರವಿಸುವ ಪರಿಪಾಠವನ್ನು ನಿರಂತರವಾಗಿ ಪಾಲಿಸುತ್ತ ಬಂದಿದ್ದಾರೆ.

ಅದರಲ್ಲೂ ಕನ್ನಡ ನಾಡಿನ ಜಾನಪದ ಕಲಾವಿದರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಸಂಗತಿ. ಈ ಬಾರಿ ಕನ್ನಡ ನಾಡಿನ ಗಂಡು ಕಲೆಯಾದ ವೀರಗಾಸೆಯ ಯುವ ಪ್ರತಿಭೆ ದೊಡ್ಡಬಳ್ಳಾಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದ ಯುವಕಲಾ ಜ್ಯೋತಿ ತಂಡದ ಪ್ರತಿಭೆ ಕೆ. ಸಿ. ಪುನೀತ್ ಕುಮಾರ್ ರವರನ್ನು ಗೋವಾದಲ್ಲಿ ನಡೆದ ವೀರಗಾಸೆ ಕಲಾ ವೈಭವದ ಕಾರ್ಯಕ್ರಮದಲ್ಲಿ,, ಕರುನಾಡ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

- Advertisement - 

     ಕರುನಾಡ ಪದ್ಮಶ್ರೀ ಪುರಸ್ಕೃತ ಕೆ. ಸಿ. ಪುನೀತ್ ಕುಮಾರ್ ರವರನ್ನು ಕೊತ್ತನೂರು ವೀರಗಾಸೆ ಕಲಾವಿದ ಕೆ. ಸಿ. ಗಂಗಾಧರ್, ಬೆಳಕ ಮಾರನಹಳ್ಳಿ ಬೆಂಕಿ ಚಂಡು ಖ್ಯಾತಿಯ ವಿಶ್ವನಾಥ್ ಚಿಕ್ಕಬಳ್ಳಾಪುರ ನವೀನ್ ವೀರಗಾಸೆ ಹಾಗೂ ಕಲಾಜ್ಯೋತಿ ತಂಡ ಸೇರಿದಂತೆ ಹಲವಾರು ಜಾನಪದ ಕಲಾವಿದರು ಅಭಿನಂದಿಸಿದ್ದಾರೆ.

- Advertisement - 
Share This Article
error: Content is protected !!
";