ಹೊಸ ಕಟ್ಟಡಗಳಿಗೆ ವಿದ್ಯುತ್‌ಸಂಪರ್ಕ ನೀಡಬಾರದು

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟ ಕರ್ನಾಟಕ ಕಾಂಗ್ರೆಸ್
ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗುತ್ತಿಗೆದಾರರ ಪರಿಸ್ಥಿತಿ ಅಯೋಮಯವಾಗಿದೆ. ಒಂದು ಕಡೆ ಬಾಕಿಯಿರುವ ₹37,000 ಸಾವಿರ ಕೋಟಿಗೂ ಅಧಿಕ ಹಣ ಪಾವತಿಸದೆ ಗುತ್ತಿಗೆದಾರರುಗಳನ್ನು ನೇಣಿನ ಕುಣಿಕೆಗೆ ತಳ್ಳುತ್ತಿದ್ದರೆ,

ಇನ್ನೊಂದು ಕಡೆ ಯಾವುದೇ ಹೊಸ ಕಟ್ಟಡಗಳಿಗೆ ವಿದ್ಯುತ್‌ಸಂಪರ್ಕ ನೀಡಬಾರದು ಎನ್ನುವ ಕಾಂಗ್ರೆಸ್ ಸರ್ಕಾರದ ಸುತ್ತೋಲೆ ವಿದ್ಯುತ್‌ಗುತ್ತಿಗೆದಾರರ ಜೀವನವನ್ನು ಅತಂತ್ರವಾಗಿಸಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

- Advertisement - 

ಜನರು ವಿದ್ಯುತ್‌ಇಲ್ಲದೆ ಪರಿತಪಿಸುತ್ತಿದ್ದರೆ, ಗುತ್ತಿಗೆದಾರರು ಕೆಲಸವಿಲ್ಲದೆ ಜೀವನ ನಡೆಸುವುದೇ ಕಷ್ಟವಾಗಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮಿತಿ ಮೀರಿದ್ದು, ಈಗ ವಿದ್ಯುತ್ ಗುತ್ತಿಗೆದರೂ ಸಹ ಬೀದಿಗಿಳಿದು ಹೋರಾಟ ಮಾಡಬೇಕಿರುವ ಪರಿಸ್ಥಿತಿ ಬಂದಿರುವುದು ರಾಜ್ಯದ ದುರಂತ.

ಕಲೆಕ್ಷನ್-ಕಮಿಷನ್-ಕರಪ್ಷನ್‌ನಲ್ಲಿ ನಿರತವಾಗಿರುವ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಪಾಲಿಗೆ ಅಕ್ಷರಶಃ ಶಾಪವಾಗಿದೆ ಎಂದು ಅಶೋಕ್ ಟೀಕಿಸಿದರು.

- Advertisement - 

 

Share This Article
error: Content is protected !!
";