ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮನ ಚಂದಿರ
ನಗುವಿನಾಳದಲಿ
ಇಣುಕಿ ಮರೆಯಾಗುವ
ಉಲಿದು ಉಮ್ಮಳಿಸಿ ತುಳುಕುವ
ಹೆಬ್ಬಾಗಿಲ ಸುಂದರ ಒಡೆಯನೇ
ಹುರಿಮೀಸೆಯ ಸರದಾರ
ದೌಲತ್ತು ದರ್ಬಾರು ತಲೆಮಾರು
ಊರ ಸರಿ ತಪ್ಪು ತಿದ್ದಿ ತೀಡುವಾತ
ಆಳು ಕಾಳು ದೇವರೂ ನೆಲ ದಿಟ್ಟಿಸಿವೆ
ಅರ್ಭಟಕೆ ಹರಿದ ಸೀರೆಗಳು ನೂರಾರು
ಹೆಸರಿಗೆ ಬಸಿರಾದ ಸಾಲು ಸೂರುಗಳು
ಕರೆದಾಗ ಮುಲುಗಿ ತಬ್ಬಿದ ಬಿಸಿಗೆ
ಕೊಸರಿ ಕೆನೆದು ಓಡದ ಕುದುರೆ
ಒಡತಿ ಕೊರಳಲಿ ಕನಸು ಕಣ್ಮರೆ
ಮುಡಿದ ಮಲ್ಲಿಗೆ ಬಾಡದ ಸಮಯ
ಮುಧವೇಳದ ಸಲ್ಲಾಪಗಳು
ಸರಸ ಕೋಣೆಯ ಮುನಿದ ಮಂಚ
ಕನವರಿಸಿದ ಅವಸರದ ಆಸೆ
ದನ ಕೊಟ್ಟಿಗೆ ಹುಲ್ಲು ಹಾಸು
ಆಳು ಬಿಗಿ ತೋಳು ಅರಳಿಸಿದವು
ಸುಗಂಧ ಪುಷ್ಪ ಪರಿಮಳ
ತೊಟ್ಟಿಲಾಟದ ಆಸೆ ಮುತ್ತೈದೆಯಲಿ
ಮೊಳಕೆಯ ಲವಲವಿಕೆ ಒಡೆಯನಲಿ
ಮನ ಚಂದಿರನಲಿ ಹುಟ್ಟುವ
ಆ ಕತ್ತಲ ಸೂರ್ಯನಿಗೆ ಎಷ್ಟೆಲ್ಲಾ ಸೊಬಗು
ಕವಿತೆ:ಕುಮಾರ್ ಬಡಪ್ಪ, ಚಿತ್ರದುರ್ಗ.

