ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಅಚರಣೆ ಮಾಡಲಾಯಿತು.
ನಗರದ ಭಗತ್ ಸಿಂಗ್ ಕ್ರೀಡಾಂಗಣದ ಪಕ್ಕದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಖ್ಯಾತ ವಕೀಲರಾದ ಶ್ರೀಮತಿ ಸುಜಾತ ರವರು ಮಾತನಾಡಿ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನವು ಇತಿಹಾಸದುದ್ದಕ್ಕೂ ಏರಿಳಿತಗಳನ್ನು ಕಂಡಿದ್ದು, ಇಂದು ಶಿಕ್ಷಣ ಮತ್ತು ಕಾನೂನಿನ ಬಲದಿಂದ ಸಬಲೀಕರಣದತ್ತ ಸಾಗುತ್ತಿದೆ. ಮನೆಗೆ ಸೀಮಿತವಾಗಿದ್ದ ಮಹಿಳೆ ಇಂದು ವಿಜ್ಞಾನ, ರಾಜಕೀಯ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದರೂ, ಲಿಂಗ ತಾರತಮ್ಯ ಮತ್ತು ಸುರಕ್ಷತೆಯ ಸವಾಲುಗಳು ಇನ್ನೂ ಉಳಿದಿವೆ. ಸಮಾನ ಅವಕಾಶ, ಗೌರವ ಮತ್ತು ಶಿಕ್ಷಣದ ಮೂಲಕವೇ ನಿಜವಾದ ಮಹಿಳಾ ಸಬಲೀಕರಣ ಸಾಧ್ಯ ಎಂದರು.
ನಂತರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ಮಾಯಾ ಸಾರಂಗಪಾಣಿ ರವರು ಮಾತನಾಡಿ ಸಮಾಜದ ಬೆನ್ನೆಲುಬಾಗಿ, ಪ್ರೀತಿ, ತ್ಯಾಗ ಮತ್ತು ಧೈರ್ಯದ ಮೂರ್ತಿಯಾಗಿರುವ ಎಲ್ಲಾ ಮಹಿಳೆಯರ ಸಾಧನೆಗಳು, ಆತ್ಮವಿಶ್ವಾಸ ಮತ್ತು ಸ್ಪೂರ್ತಿದಾಯಕ ಶಕ್ತಿಯನ್ನು ಗೌರವಿಸುತ್ತಾ, ಲಿಂಗ ಸಮಾನತೆಯತ್ತ ಹೆಜ್ಜೆ ಹಾಕುತ್ತಿದೆ. ಹೆಣ್ಣು ಇದ್ದರೆ ಮನೆ, ಹೆಣ್ಣು ಇದ್ದರೆ ಬಾಳು ಬಂಗಾರ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬಂತೆ ಸಮಾಜದಲ್ಲಿ ಹೆಣ್ಣಿನ ಪಾತ್ರ ಬಹುಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಐ ಕ್ಯೂ ಎ ಸಿ ಘಟಕ ಸಂಚಾಲಕರಾದ ಡಾ. ಸುಷ್ಮಾ ಹೆಚ್. ಡಾ. ಜ್ಯೋತಿ ಬನ್ನಿಹಟ್ಟಿ. ಹಾಗು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಬೋಧಕರು/ಬೋಧಕೇತರರು/ವಿದ್ಯಾರ್ಥಿನಿಯರು ಹಾಜರಿದ್ದರು.
“ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 1908ರಲ್ಲಿ ಅಮೆರಿಕಾದ ಕಾರ್ಮಿಕ ಚಳುವಳಿ ರಷ್ಯಾ ಮಹಿಳೆಯರ ಬ್ರೆಡ್ ಮತ್ತು ಶಾಂತಿ ಪ್ರತಿಭಟನೆಯ ಹಿನ್ನೆಲೆ ಉದ್ಭವಿಸಿತ್ತು ನಂತರ ವಿಶ್ವ ಸಂಸ್ಥೆ ಮಹಿಳೆಯರಿಗೆ ಒಂದು ಸ್ಥಾನ ಮಾನ ನಿಡುವ ನಿಟ್ಟಿನಲ್ಲಿ 1975ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದ ಅಅಧಿಕೃತವಾಗಿ ಘೋಷಣೆ ಮಾಡಿತು”.
ಮಾಯಾ ಸಾರಂಗಪಾಣಿ, ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ದೊಡ್ಡಬಳ್ಳಾಪುರ.

