ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಸುಷ್ಮಾ, ಮಹಾದೇವಮ್ಮ ಅವಿರೋಧ ಆಯ್ಕೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಜರಾಹೊಸಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು  ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸುಷ್ಮಾ ಹರೀಶ್ ಹಾಗೂ ಉಪಾಧ್ಯಕ್ಷರಾಗಿ ಮಹದೇವಮ್ಮ ಹನುಮಂತರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಿಶೇಷವಾಗಿ ಮಜರಾಹೊಸಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಹ ಮಹಿಳೆಯರಾಗಿದ್ದು ವಿಶೇಷವಾಗಿ ಮಹಿಳಾ ದಿನಾಚರಣೆ ಸಮಯದಲ್ಲಿ ಈ ಆಯ್ಕೆ ನಡೆದಿರುವುದು ಮಹಿಳೆಯರಿಗೆ ಕೊಟ್ಟಿರುವಂತಹ ವಿಶೇಷ ಸ್ಥಾನಮಾನವಾಗಿದೆ.

- Advertisement - 

  ರುದ್ರಾಣಮ್ಮ ಮಂಜುನಾಥ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಿಪ್ಪಾಪುರದ ಕಾಂಗ್ರೆಸ್ ಮುಖಂಡ  ಮಾರಪ್ಪನವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಅಧ್ಯಕ್ಷ ಸ್ಥಾನಕ್ಕೆ ಸುಷ್ಮಾ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಹಾದೇವಮ್ಮ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಅಧ್ಯಕ್ಷರಾಗಿ ಸುಷ್ಮ ಮತ್ತು ಉಪಾಧ್ಯಕ್ಷರಾಗಿ ಮಹದೇವಮ್ಮ ಕ್ರಮವಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಉಪಾಧ್ಯಕ್ಷರು ಮಾತನಾಡಿ  ಮೂಲಭೂತ ಸೌಕರ್ಯಗಳನ್ನು  ಸಾರ್ವಜನಿಕರಿಗೆ ಒದಗಿಸುವುದು ನಮ್ಮ ಉದ್ದೇಶವಾಗಿದೆ. ಹಿಂದಿನ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸ್ಥಳೀಯ  ಮುಖಂಡರಾದ ಬಿ. ಸಿ. ಆನಂದಕುಮಾರ್, ತಿ.ರಂಗರಾಜು, ಬಿ.ಎಚ್ ಕೆಂಪಣ್ಣರಂತಹ ಹಿರಿಯರ ಮಾರ್ಗದರ್ಶನದಲ್ಲಿ ಈಗಾಗಲೇ ಅಭಿವೃದ್ಧಿ ಹೊಂದಿರುವ ಪಂಚಾಯ್ತಿಯನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲಿದ್ದೇವೆ ಎಂದು ಹೇಳಿದರು.

- Advertisement - 

ಈ  ಸಂದರ್ಭದಲ್ಲಿ ಬಿ.ಸಿ ಆನಂದ್, ತಿ.ರಂಜರಾಜು, ಬಿ ಎಚ್ ಕೆಂಪಣ್ಣ, ಪಿಳ್ಳೇಗೌಡ, ರುದ್ರಾಣಮ್ಮ ಮಂಜುನಾಥ್, ಹೊಸಹುಡ್ಯ ಆನಂದ್, ನೀಲಮ್ಮ ಪಿಳ್ಳೇಗೌಡ, ಲಕ್ಷ್ಮಮ್ಮ ಸೇರಿದಂತೆ ಗ್ರಾಮಪಂಚಾಯಿತಿ ಅಧಿಕಾರಿಗಳು ಸದಸ್ಯರು ಹಾಗೂ ಪಂಚಾಯ್ತಿ ವ್ಯಾಪ್ತಿಯ ಹಲವಾರು ಮುಖಂಡರು ಹಾಜರಿದ್ದರು.

 

Share This Article
error: Content is protected !!
";