ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಾರ್ಚ್ 14ರ ಶನಿವಾರದಂದು ತಾಲ್ಲೂಕಿನ ಸೋಮೇಶ್ವರ ದೇವಾಲಯದಲ್ಲಿ ಬೆಳಿಗ್ಯೆ 7ರಿಂದ 11 ಗಂಟೆವರೆಗೆ ಸೋಮನಾಥ ಜ್ಯೋತಿರ್ಲಿಂಗ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹಾರ್ಟ್ ಆಫ್ ಲಿವಿಂಗ್ ಪ್ರಮುಖ ಸುನಿಲ್ ವೆಂಕಟೇಶ್ ತಿಳಿಸಿದರು.
ನಗರದ ಹಾರ್ಟ್ ಆಫ್ ಲಿವಿಂಗ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೊಘಲರಿಂದ ಹಲ್ಲೆಗೊಳಗಾಗಿ ಛಿದ್ರವಾಗಿದ್ದ ಸೋಮನಾಥ ಜ್ಯೋತಿರ್ಲಿಂಗವು ಸೀತಾ ರಾಮ ಶಾಸ್ತ್ರಿಯವರ ಮುಖೇನಾ 2025 ರಲ್ಲಿ ಮರಳಿ ಹಾರ್ಟ್ ಆಫ್ ಲಿವಿಂಗ್ ನ ಶ್ರೀ ರವಿ ಶಂಕರ್ ಗುರೂಜಿ ಕೈ ಸೇರಿದ್ದು , ದೇಶದಾದ್ಯಂತ ಜನರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕೆಂಬ ಗುರೂಜಿಯವರ ಮಹತ್ಸಂಕಲ್ಪದಿಂದ 1000 ವರ್ಷಗಳ ಪುರಾತನ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ದರ್ಶನವನ್ನು ದೊಡ್ಡಬಳ್ಳಾಪುರ ಜನತೆಗೆ ಮಾರ್ಚ್ 14 ರಂದು ಕಲ್ಪಿಸಲಾಗಿದೆ ಎಂದರು.
100 ದಂಪತಿಗಳಿಂದ ವಿಶೇಷ ರುದ್ರಾರ್ಚನೆ, ಮಾರ್ಚ್ 14 ರಂದು ವಿಶೇಷ ರುದ್ರಾಭಿಷೇಕ ಆಯೋಜನೆ ಮಾಡಿದ್ದು, ಈ ಪೂಜಾ ಕಾರ್ಯಕ್ರಮದಲ್ಲಿ 100 ದಂಪತಿಗಳಿಗೆ ಅವಕಾಶ ಕಲ್ಪಿಸಿದ್ದು ಮುಂಗಡ ಬುಕಿಂಗ್ ವ್ಯವಸ್ಥೆ ಮಾಡಲಾಗಿದೆ ಹಾಗೂ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳ ದರ್ಶನಕ್ಕೆ ಸೂಕ್ತ ಅವಕಾಶ ಕಲ್ಪಿಸಿದ್ದು ಜಿಲ್ಲೆ ಹಾಗೂ ತಾಲ್ಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ದೇವರ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.
ಸುದ್ದಿ ಗೋಷ್ಠಿಯಲ್ಲಿ ಹಿರಿಯ ಶಿಕ್ಷಕ ವೆಂಕಟ ರಾಮು, ಸ್ವಯಂ ಸೇವಕರು ಮಂಜುನಾಥ್, ಶಿಲ್ಪಾ, ಸುನಿಲ್ ವೆಂಕಟೇಶ್ ಹಾಜರಿದ್ದರು.

