ಸಮಾಜ ಸೇವೆಯ ದಾರಿಯಲ್ಲಿ ಪ್ರೇರಣೆಯ ಬೆಳಕು ಜೆ. ರಾಜು-ಶ್ರೀನಿವಾಸ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರು ಹಾಗೂ ಕೆಂಪೇಗೌಡ ದಂತ ವೈದ್ಯ ಮಹಾವಿದ್ಯಾಲಯದ ಅಧ್ಯಕ್ಷರಾದ ಬೇತೂರುಪಾಳ್ಯ ಜೆ. ರಾಜು ಅವರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ನಿಜವಾಗಿಯೂ ಸಂತೋಷಕರ ಹಾಗೂ ಹೆಮ್ಮೆಯ ವಿಚಾರ. ಸಮಾಜದ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳಿಗೆ ಸದಾ ಬೆಂಬಲ ನೀಡುವ ನಿಮ್ಮ ಮನೋಭಾವ ಎಲ್ಲರಿಗೂ ಪ್ರೇರಣೆಯಾಗುತ್ತದೆ ಎಂದು ಸಮಾಜ ಚಿಂತಕ ಕೆ.ಟಿ ಶ್ರೀನಿವಾಸ್ ಮೆಚ್ಚುಗೆ ವ್ಯಕ್ತಪಡಿಸಿದರು.

ಅವರು ಕೆರೆಯಾಗಳಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ತಿಮ್ಮಪ್ಪಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಾಲಯದ ನಿರ್ಮಾಣ ಕಾರ್ಯಗಳ ಬಗ್ಗೆ ಆತ್ಮೀಯವಾಗಿ ಚರ್ಚೆ ನಡೆಸಿ, ಧನ ಸಹಾಯ ನೀಡಿರುವುದು ದಾನಶೀಲತೆಯ ಪ್ರತೀಕವಾಗಿದೆ. ಒಂದು ಲಕ್ಷ ರೂ.ದೇಣಿಗೆ ನೀಡಿರುವುದಿಲ್ಲದೆ ಜೊತೆಗೆ ತಿರುಪತಿಯಿಂದ ಉಚಿತವಾಗಿ ವಿಗ್ರಹ ತರಿಸಿಕೊಡುವ ಭರವಸೆ ನೀಡಿರುವುದು ದೇವರ ಸೇವೆಯೊಂದಿಗೆ ಸಮಾಜದ ಸೇವೆಯನ್ನೂ ಒಂದೇ ಸಮಯದಲ್ಲಿ ಮಾಡುವ ಮಹತ್ತರ ಕಾರ್ಯವಾಗಿದೆ ಎಂದು ಶ್ರೀನಿವಾಸ್ ತಿಳಿಸಿದರು.

- Advertisement - 

ಬೇತೂರು ರಾಜು ಅವರ ಇಂತಹ ನಿಸ್ವಾರ್ಥ ಸಮಾಜ ಸೇವೆಯ ದಾರಿ ಇನ್ನಷ್ಟು ವಿಶಾಲವಾಗಿ ಬೆಳೆಯಲಿ. ರಾಜು ಅವರ ಸೇವಾ ಮನೋಭಾವವು ಅನೇಕ ಜನರಿಗೆ ಪ್ರೇರಣೆ ಸಿಗಲಿ. ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ಕೆ.ಟಿ ಶ್ರೀನಿವಾಸ್ ಅವರು ಪರಮಾತ್ಮನಲ್ಲಿ ಪ್ರಾರ್ಥಿಸಿದರು.

ರಾಜು ಅವರಂತಹ ಸಮಾಜ ಸೇವಕರಿಂದ ಸಮಾಜಕ್ಕೆ ಬೆಳಕು ದೊರೆಯುತ್ತದೆ. ಈ ಮಹನೀಯ ಕಾರ್ಯಗಳಿಗೆ ಹೃದಯಪೂರ್ವಕ ಅಭಿನಂದನೆಗಳು ಮತ್ತು ಕೃತಜ್ಞತೆಗಳು. ಮುಂದಿನ ದಿನಗಳಲ್ಲಿಯೂ ನಿಮ್ಮ ಸಮಾಜಮುಖಿ ಸೇವೆಗಳು ಇನ್ನಷ್ಟು ಮಹತ್ತರವಾಗಿ ಮುಂದುವರಿಯಲಿ ಎಂದು ಶ್ರೀನಿವಾಸ್ ಕೆ ಟಿ ಶುಭ ಹಾರೈಸಿದರು.
ಕೆರೆಯಾಗಳಹಳ್ಳಿ ರಂಗಧಾಮ, ಗೊಲ್ಲರಹಳ್ಳಿ ಹನುಮಂತು, ವಿನಯ್, ರಘು ಗೌಡ ಮತ್ತಿತರರು ಇದ್ದರು.

- Advertisement - 

Share This Article
error: Content is protected !!
";