ಕೆಎಸ್‍ಆರ್‍ಟಿಸಿಯ ‘ಧ್ವನಿ ಸ್ಪಂದನ’: ರಾಷ್ಟ್ರೀಯ ಪ್ರಶಸ್ತಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ನವೀನ ತಂತ್ರಜ್ಞಾನದ ಸಾಧನೆಗಾಗಿ ಮತ್ತೊಂದು ರಾಷ್ಟ್ರೀಯ ಮನ್ನಣೆಯನ್ನು ಪಡೆದಿದೆ. ನವದೆಹಲಿಯ ನೆಹರು ಪ್ಲೇಸ್‍ನಲ್ಲಿರುವ ಹೋಟೆಲ್ ಎರೋಸ್‍ನಲ್ಲಿ 2026 ನೇ ಮಾರ್ಚ್ 11 ರಂದು ನಡೆದ ಸಮಾರಂಭದಲ್ಲಿ ನಿಗಮಕ್ಕೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಕೆಎಸ್‍ಆರ್‍ಟಿಸಿಯ ನಿರ್ದೇಶಕಿ (ಸಿ ಮತ್ತು ಜಾ) ಗಾಯಿತ್ರಿ ಕೆ. ಎಂ., ಅವರು, ‘oveಡಿಟಿಚಿಟಿಛಿe oತಿಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೈಲಾಶ್ ಅಧಿಕಾರಿ ಮತ್ತು ಅಮಿತ್ ಸಾದ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.

- Advertisement - 

ನಿಗಮದ ಧ್ವನಿಸ್ಪಂದನಉಪಕ್ರಮಕ್ಕೆ ‘Excellence in Innovation’  (ನಾವೀನ್ಯತೆಯಲ್ಲಿ ಶ್ರೇಷ್ಠತೆ) ವಿಭಾಗದಲ್ಲಿ ಈ ಗೌರವ ಲಭಿಸಿದೆ.

ಮೈಸೂರು ನಗರ ಸಾರಿಗೆಯ 200 ಬಸ್ಸುಗಳಲ್ಲಿ ಜರ್ಮನಿಯ GiZ  ಸಂಸ್ಥೆಯ ಸಹಯೋಗದೊಂದಿಗೆ ಧ್ವನಿಸ್ಪಂದನ ಆನ್ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್ಅನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ.

- Advertisement - 

ಈ ಯೋಜನೆಯು ವಿಶೇಷವಾಗಿ ದೃಷ್ಟಿ ದಿವ್ಯಾಂಗ ಪ್ರಯಾಣಿಕರ ಪ್ರಯಾಣದ ಅವಲಂಬನೆಯನ್ನು ಕಡಿಮೆ ಮಾಡಿದೆ. ಇದು ಅವರ ಆತ್ಮವಿಶ್ವಾಸ, ಸುರಕ್ಷತೆ ಮತ್ತು ಸಂಚಾರದ ಸ್ವಾತಂತ್ರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಮಂಡಳಿ ಕಾರ್ಯದರ್ಶಿ / ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
error: Content is protected !!
";