ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಳ್ಳಾರಿ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ವಿಸ್ತøತ ಯೋಜನೆಗಾಗಿ ಸಮಾಲೋಚಕರನ್ನು ನೇಮಿಸುವ ಹಂತದಲ್ಲಿದ್ದು ಬಳ್ಳಾರಿ ವಿಮಾನ ನಿಲ್ದಾಣದ ವಿಸ್ತøತ ಯೋಜನಾ ವರದಿಯು ಪೂರ್ಣಗೊಂಡ ನಂತರ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ವಿಧಾನಸಭೆಯ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಜನಾರ್ಧನ್ ರೆಡ್ಡಿ ಇವರ ಪ್ರಶ್ನಿಸಿ ಈಗಾಗಲೇ 900 ಎಕರೆ ಜಮೀನು ಗುರುತಿಸಲಾಗಿದ್ದು, ಪಿಪಿಪಿ ಮಾದರಿಯಡಿ ಅಭಿವೃದ್ಧಿಪಡಿಸಲು ಅನುಮೋದಿಸಿದೆ. ಸರ್ಕಾರ ಬಳ್ಳಾರಿಗೆ ವಿಮಾನ ನಿಲ್ದಾಣ ನೀಡುವ ಬಗ್ಗೆ ಪುನರ್ ಪರಿಶೀಲಿಸಬೇಕೆಂದು ಕೋರಿದರು.
ಬಳ್ಳಾರಿ ವಿಮಾನ ನಿಲ್ದಾಣವನ್ನು ಪಿಪಿಪಿ ಮಾದರಿಯಡಿ ಅಭಿವೃಧ್ಧಿಪಡಿಸಲು ಈ ಹಿಂದೆ ಅನುಮೋದಿಸಲಾಗಿರುತ್ತದೆ. ಯೋಜನಾ ಪ್ರವರ್ತಕರು ಯಾವುದೇ ಕಾಮಗಾರಿಗಳನ್ನು ಪ್ರಾರಂಭಿಸದಿದ್ದರಿಂದ ಸದರಿ ಸಂಸ್ಥೆಯೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಿ EPC (Engineering Procurement and Construction) ಮಾದರಿಯಲ್ಲಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ದಿನಾಂಕ: 16-11-2022ರಂದು ಆದೇಶವಾಗಿರುತ್ತದೆ. ಪ್ರಸ್ತುತ ಯೋಜನೆಗೆ ಸಂಬಂಧಸಿದಂತೆ ವಿಸ್ತøತ ಯೋಜನಾ ವರದಿ ಸಿದ್ದಪಡಿಸಲು ಸಮಾಲೋಚಕರನ್ನು ನೇಮಿಸುವ ಹಂತದಲ್ಲಿರುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

