ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ರಾಮತೀರ್ಥ ತಾಂಡದ ನಿವಾಸಿ ದಾಮಾಜಿ ಮಾನ್ಸಿಂಗ್ ಚವಾಣ್ ಮತ್ತು ವೀಣಾ ಚವಾಣ್ ದಂಪತಿಯ ಹಿರಿಯ ಪುತ್ರ, ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ವಿಭಾಗದ ಸಂಶೋಧನಾರ್ಥಿ ವಿನೋದ್ ಕುಮಾರ್ ಡಿ ಚವಾಣ್ ರವರಿಗೆ ಪಿಎಚ್.ಡಿ ಪದವಿ ಲಭಿಸಿದೆ.
ಸಂವಹನ ವಿಭಾಗದ ಪ್ರಾಧ್ಯಾಪಕ ಪ್ರೊ. ಎನ್. ಸಂಜೀವ್ ರಾಜ್ ರವರ ಮಾರ್ಗದರ್ಶನದಲ್ಲಿ ಮಂಡಿಸಿದ “ಸೋಶಿಯಲ್ ಮೀಡಿಯಾ ಇಂಟರ್ವೆನ್ಶನ್ ಫಾರ್ ಪಾರ್ಟಿಸಿಪೇಟರಿ ಸ್ಪೋರ್ಟ್ಸ್ ಮ್ಯಾನೇಜ್ ಮೆಂಟ್ ಇನ್ ಕರ್ನಾಟಕ ಸ್ಟೇಟ್: ಎ ಕಂಪರೇಟಿವ್ ಸ್ಟಡಿ ಆಫ್ ಫೇಸ್‌ಬುಕ್ ಅಂಡ್ ಯೂಟ್ಯೂಬ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ವೇಳೆಯಲ್ಲಿ ವಿನೋದ್ ಕುಮಾರ್ ಡಿ ಚವಾಣ್ ರವರ ಶೈಕ್ಷಣಿಕ ಸಾಧನೆಗಾಗಿ ಕುಟುಂಬಸ್ಥರು, ಗುರು-ಹಿರಿಯರು, ಸ್ನೇಹಿತರು ಮತ್ತು ರಾಮತೀರ್ಥ ತಾಂಡದ ಸುತ್ತಮುತ್ತಲಿನವರು ಸೇರಿ ಶುಭ ಕೋರಿ ಅಭಿನಂದನೆ ಸಲ್ಲಿಸಿದ್ದಾರೆ.

