ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಿಂದ ನಗರದ ಹೊರವಲಯದ ದುರ್ಗಾವರ ರಸ್ತೆಯಲ್ಲಿರುವ ಕೊರಮ ಜನಾಂಗದ ಇಪ್ಪತ್ತು ಅಲೆಮಾರಿ ಕುಟುಂಬಗಳಿಗೆ ದಿನಬಳಕೆಯ ದಿನಸಿ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಶಾರದಾಶ್ರಮದ ಅಧ್ಯಕ್ಷೆ ಮಾತಾಜೀ ತ್ಯಾಗಮಯೀ ಅವರು ಶ್ರೀಶಾರದಾಶ್ರಮದ ಸದ್ಭಕ್ತರ ಉದಾರ ಆರ್ಥಿಕ ನೆರವಿನಿಂದ ಆರ್ಥಿಕವಾಗಿ ಹಿಂದುಳಿದಿರುವ ಕೊರಮ ಜನಾಂಗದ ಇಪ್ಪತ್ತು ಅಲೆಮಾರಿ ಕುಟುಂಬಗಳಿಗೆ ದಿನಸಿಗಳಾದ ರಾಗಿ, ಗೋಧಿ, ತೊಗರಿಬೇಳೆ, ಬೆಲ್ಲ, ಎಣ್ಣೆ, ಸೋಪ್, ಬಟ್ಟೆಗಳನ್ನು ವಿತರಿಸಿ ಜೀವ ಶಿವ ಸೇವಾ ಕಾರ್ಯವನ್ನು ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ನೆರವನ್ನು ನೀಡಲಾಗುವುದು ಎಂದರು.
ಬಾಪೂಜಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಾಂಶುಪಾಲ ಡಾ.ಸಿ.ಟಿ.ಬಸವರಾಜಪ್ಪ ಮಾತನಾಡಿ ಶ್ರೀಶಾರದಾಶ್ರಮದ ಸದ್ಭಕ್ತರ ನೆರವಿನಿಂದ ವಿತರಿಸಲಾದ ದಿನಸಿ ವಸ್ತುಗಳನ್ನು ಪೂರ್ಣವಾಗಿ ಸದುಪಯೋಗ ಪಡಿಸಿಕೊಂಡು ಉತ್ತಮ ಆರೋಗ್ಯವಂತರಾಗಿ ಸಾರ್ಥಕ ಜೀವನ ನಡೆಸುವಂತೆ ಹಿತವಚನ ಹೇಳಿದರು.
ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಡಾ.ಲಾವಣ್ಯ, ಸರಸ್ವತಿ ಪಾಂಡು , ಗಂಗಾಧರಶೆಟ್ಟಿ, ಪ್ರೇಮಲೀಲಾ, ಗೀತಾ ಪ್ರಕಾಶ್, ನಾಗರಾಜ್, ಅನುಸೂಯ ರಾಘವೇಂದ್ರ, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ಸಂತೋಷ್, ಸುಧಾಮಣಿ, ವಿಶಾಲಾಕ್ಷಿ ಪುಟ್ಟಣ್ಣ, ಅಂಬುಜಾ, ಕವಿತಾ, ಸರಸ್ವತಿ, ಡಾ.ಭೂಮಿಕಾ, ವನಜಾಕ್ಷಿ, ರಶ್ಮಿ ವಸಂತ, ಯಶಸ್ವಿ,ವಿದ್ಯಾ, ಪಿ.ಎಸ್.ಮಾಣಿಕ್ಯ, ಸತ್ಯನಾರಾಯಣ, ಹೊನ್ನೂರಪ್ಪ, ಯುವರಾಜ್, ರವಿ, ಭೂತಪ್ಪ, ರಮೇಶ್ ಸೇರಿದಂತೆ ಕೊರಮ ಜನಾಂಗದ ಅಲೆಮಾರಿಗಳು ಉಪಸ್ಥಿತರಿದ್ದರು.

