ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೈತ ವಿರೋಧಿ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಪ್ರತಿ ಟನ್ಕಬ್ಬಿಗೆ 3350 ರೂ. ದರ ನಿಗದಿ ಮಾಡಿ ಕೈತೊಳೆದುಕೊಂಡಿದ್ದಷ್ಟೇ ಬಂತು. ರೈತರಿಗೆ ಇನ್ನೂ ನ್ಯಾಯ ಸಿಗಲೇ ಇಲ್ಲ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ಮೂರ್ನಾಲ್ಕು ತಿಂಗಳಾದರೂ ರೈತರ ಕಬ್ಬಿನ 500 ಕೋಟಿಗೂ ಹೆಚ್ಚು ಬಾಕಿ ಹಣವನ್ನು ಕಾಂಗ್ರೆಸ್ಸಚಿವರು, ಶಾಸಕರ ಒಡೆತನದ ಸಕ್ಕರೆ ಕಾರ್ಖಾನೆಗಳು ಪಾವತಿಸದೆ ವಂಚಿಸುತ್ತಿವೆ. ಆದರೂ ಸಿಎಂ ಸಿದ್ದರಾಮಯ್ಯ ಅವರು ಕಂಡು ಕಾಣದಂತೆ ಸುಮ್ಮನಿದ್ದಾರೆ ಎಂದು ಜೆಡಿಎಸ್ ದೂರಿದೆ.
ಸಚಿವ ಸತೀಶ್ಜಾರಕಿಹೊಳಿ ಒಡೆತನದ ಸತೀಶ್ಶುಗರ್ಸ್- 129 ಕೋಟಿ ಬಾಕಿ. ಸಚಿವ ಸತೀಶ್ಜಾರಕಿಹೊಳಿ ಒಡೆತನದ ಬೆಳಗಾಂ ಶುಗರ್ಸ್ – 77 ಕೋಟಿ ಬಾಕಿ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಒಡೆತನದ ಹರ್ಷ ಸಕ್ಕರೆ ಕಾರ್ಖಾನೆ – 28.27 ಕೋಟಿ ಬಾಕಿ.
MLC ಚನ್ನರಾಜ್ಹಟ್ಟಿಹೊಳಿ ಒಡೆತನದ ಮಲಪ್ರಭಾ ಸಕ್ಕರೆ ಕಾರ್ಖಾನೆ ) –35.85 ಕೋಟಿ ಬಾಕಿ ( ಸಚಿವೆ ಲಕ್ಷ್ಮೀ ಹೆಬ್ಳಾಕರ್ಸಹೋದರ). ರಮೇಶ್ಜಾರಕಿಹೊಳಿ ಪುತ್ರನ ಒಡೆತನದ ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ – 14 ಕೋಟಿ ಬಾಕಿ. ವಿಕ್ರಂ ಇನಾಮದಾರ್ಒಡೆತನದ ಇನಾಮದಾರ್ಶುಗರ್ಸ್- 46.65 ಕೋಟಿ ಬಾಕಿ ಇರುವುದನ್ನು ಜೆಡಿಎಸ್ ಪಟ್ಟಿ ಮಾಡಿ ಬಿಡುಗಡೆ ಮಾಡಿದೆ.

