ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಹದಗೆಟ್ಟಿರುವ ಒಳಚರಂಡಿ, ಚರಂಡಿ ವ್ಯವಸ್ಥೆ. ವಿದ್ಯುತ್ ಕಣ್ಣಾ ಮುಚ್ಚಾಲೆ, ಟ್ರಾನ್ಸಫಾರಂರ್ ಕೊರತೆ ಮೊದಲಾದ ಸಮಸ್ಯೆಗಳ ಪರಿಹಾರಕ್ಕೆ ಅಂದ್ರಾಳು ಕರ್ನಾಟಕ ಗೃಹ ಮಂಡಳಿ ಕಾಲೋನಿಯ ಮನೆ ಮತ್ತು ನಿವೇಶನಗಳ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಂಘದ ಅಧ್ಯಕ್ಷ ಎಂ. ನಬಿಸಾಹೆಬ್ ಕಾಲೋನಿಯಲ್ಲಿ ಬೀದಿ ದೀಪಗಳನ್ನು ಅಳವಡಿಸುವಲ್ಲಿ ಇಲಾಖೆಯು ನಿರ್ಲಕ್ಷ್ಯವಹಿಸಿದೆ. ನಿಗದಿಪಡಿಸಿದ ಪಾರ್ಕ್ ಜಾಗಗಳಲ್ಲಿ ಪಾರ್ಕ್ ವ್ಯವಸ್ಥೆ ಮಾಡದೆ ಕಾಡು ರೀತಿ ಬೇಲಿ ಬೆಳೆದಿದೆ. ರಸ್ತೆ ಇಕ್ಕೆಲಗಳಲ್ಲಿ ಗಿಡಗಂಟೆ ಜಾಲಿ ಬೆಳೆದು ದಾರಿಹೋಕರಿಗೆ ಸಮಸ್ಯೆಯಾಗುತ್ತದೆ. ಕಾಲೋನಿಯಲ್ಲಿರುವ ಓವರ್ ಹೆಡ್ ಟ್ಯಾಂಕನ್ನು ಸೂಕ್ತ ರೀತಿಯಲ್ಲಿ ಬಳಸದೆ ಜನರಿಗೆ ನೀರಿನ ಸಮಸ್ಯೆಯಾಗುತ್ತದೆ. ಕಾಲೋನಿಗೆ ಸಂಪರ್ಕ ಒದಗಿಸುವ ಮುಖ್ಯದ್ವಾರದ ಸಮಸ್ಯೆಯನ್ನು ಇತ್ಯರ್ಥಪಡಿಸದೆ ಹಾಗೆ ಬಿಟ್ಟಿದೆ.ಸಿ ಎ ಸೈಟ್ಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದೆ ಇರುವುದರಿಂದ ಅವು ಕುಡುಕರ ತಾಣಗಳಾಗಿವೆ.
ಕಾಲೋನಿಯ ನಾಗರಿಕರ ಸುರಕ್ಷತೆಗಾಗಿ ಪೊಲೀಸ್ ಬೀಟ್ ಅನ್ನು ಮತ್ತಷ್ಟು ಹೆಚ್ಚಿಸಬೇಕು. ಕಾಲೋನಿಯ ನಿವಾಸಿಗಳು ಎಲ್ಲಾ ರೀತಿಯ ತೆರಿಗೆ ಹಾಗೂ ಬಿಲ್ಲುಗಳನ್ನು ಪಾವತಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳಿಂದ ನಿರ್ಲಕ್ಷತನವಿದೆ. ಒಳಚರಂಡಿ ವ್ಯವಸ್ಥೆಯ ಅಸಮರ್ಪಕ ಸಂಪರ್ಕದಿಂದ ಮನೆಯ ಶೌಚಾಲಯಗಳಲ್ಲಿ ದುರ್ವಾಸನೆ ಉಂಟಾಗಿ ಮನೆಯ ಆರೋಗ್ಯ ಹದಗೆಟ್ಟಿರುತ್ತದೆ. ಇದೆಲ್ಲವನ್ನು ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.

