ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಕ್ಷಯ ವಿಪ್ರ ಮಹಾಸಭಾ ಸಂಘದ ವಿವಿಧ ಕಲ್ಯಾಣ ಯೋಜನೆಗಳ ಭಾಗವಾಗಿ ಮಾರ್ಚ್-15 ರಂದು ಬೆಂಗಳೂರು ಬಸವನಗುಡಿಯಲ್ಲಿ ಬೃಹತ್ ವಧು ವರ ಸಮಾನ್ವೇಷಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನ್ಯಾಯಾಧೀಶರಾದ ವಿ. ಶ್ರೀಶಾನಂದ, ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ಶಾಸಕರುಗಳಾದ ರವಿಸುಬ್ರಮಣ್ಯ ಮತ್ತು ಸಿ.ಕೆ. ರಾಮಮೂರ್ತಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಘುನಾಥ್‌ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಬೆಂಗಳೂರಿನ ಕೆ.ಆರ್.ರಸ್ತೆಯ ನೆಟ್ಟಕಲ್ಲಪ್ಪ ವೃತ್ತದ ಬಸವನಗುಡಿಯ ನಂ.೫೦.ರಲ್ಲಿರುವ ದ್ವಾರಕನಾಥ ಭವನದಲ್ಲಿ ಭಾನುವಾರ ಬೆಳಿಗ್ಗೆ ೯-೩೦ರಿಂದ ತ್ರಿಮಸ್ಥ ಬ್ರಾಹ್ಮಣರಿಗಾಗಿ ಈ ಸಮಾವೇಶ ಆಯೋಜಿಸಲಾಗಿದೆ.
ಸುಮಾರು ೨೦ ವರ್ಷಗಳ ವಧು-ವರಾನ್ವೇಷಣ ಸಮಾವೇಶ ಅನುಭವ, ಪೋಷಕರೊಂದಿಗೆ ೫೦೦ ವಧು-ವರರ ಪಾಲ್ಗೊಳ್ಳುವಿಕೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿಷ್ಠಿತ ಸಂಯೋಜಕರಿಂದ ವಧು-ವರ ವಿವರಗಳನ್ನು ಡಿಜಿಟಲ್ ಡಿಸ್ಪ್ಲೇ ಮುಖೇನ ವಿವರಣೆ ನೀಡಲಾಗುತ್ತದೆ. ವಧು – ವರರ ನೇರ ಸಂಪರ್ಕಕ್ಕೆ ಅವಕಾಶವಿದ್ದು `ಜಾತಕ‘ ಪರಿಶೀಲನೆಗೆ ಜ್ಯೋತಿಷಿಗಳ ಉಪಸ್ಥಿತಿ ಇರಲಿದೆ.
ಸಮಾವೇಶ ನಂತರ ಮೂರು ತಿಂಗಳಿಗೊಮ್ಮೆ ಮುಖಾ – ಮುಖಿ ಸಮಾವೇಶಗಳಿಗೆ ಅವಕಾಶ ನೀಡಲಾಗುತ್ತದೆ. ಅರ್ಹ ಆಸಕ್ತರು ತಮ್ಮ ಹೆಸರನ್ನು ಪೋಸ್ಟ್ ಕಾರ್ಡ್ ಗಾತ್ರದ ೨ ಫೋಟೋ ಮತ್ತು ಜಾತಕದ ಪ್ರತಿಯೊಂದಿಗೆ ನೋಂದಾಯಿಸಬೇಕು. ಈ ಸಮಾವೇಶಕ್ಕೆ ನೋಂದಣಿ ಶುಲ್ಕ ಅನ್ವಯಿಸುತ್ತದೆ. Online Registration Website: www.akshayavipra.in̤ ಹೆಚ್ಚಿನ ವಿವರಗಳಿಗೆ ಮಬೈಲ್: 9740514315/9731770324/8618092315 8884172840/8147337593, 9845644950 ಸಂಪರ್ಕಿಸಲು ಕೋರುತ್ತೇವೆ.

