ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿ ಕೊಳ್ಳಬೇಕಿದೆ-ವಿ. ವರಲಕ್ಷ್ಮಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಹಿಳಾ ದಿನ ಕೇವಲ ಒಂದು ದಿನದ ಆಚರಣೆಯಲ್ಲ ಬದಲಾಗಿ ಮಹಿಳೆಯರ ಸಮಾನತೆಗಾಗಿ ನಡೆಯುತ್ತಿರುವ ನಿರಂತರ ಹೋರಾಟದ ಸಂಕೇತ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ವರಲಕ್ಷ್ಮಿ .ವಿ  ಹೇಳಿದರು. ಶ್ರೀ ದೇವರಾಜ್ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಿತು.

 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹೆಣ್ಣು ಈ ಸಮಾಜದ ಬೆನ್ನೆಲುಬು ಒಂದು ಕಾಲದಲ್ಲಿ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಹೆಣ್ಣು ಇಂದು ಆಕಾಶವನ್ನೇ ಮುಟ್ಟಿದ್ದಾಳೆ, ಮಹಿಳೆಯರು ಸ್ವಾವಲಂಬಿಗಳಾಗಿ ಬದುಕನ್ನು ಕಟ್ಟಿಕೊಳ್ಳಬೇಕು, ಬಣ್ಣದ ಜಗತ್ತಿಗೆ ಬೆರಗಾಗ ಬಾರದು ಎಂದರು.

- Advertisement - 

 ಲೀಜಿಯನ್ ಎನರ್ಜಿ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿಯಾದ ಮಮತಾಶ್ರೀ  ಮಾತನಾಡಿ ಮಹಿಳೆಯರ ಯಶಸ್ಸಿಗೆ ಸರಿಯಾದ ಮಾರ್ಗ ತೋರಿಸಿದರೆ ಅವರು ಅತ್ಯದ್ಭುತವಾಗಿ ಸಾಧನೆ ಮಾಡುವುದಲ್ಲದೆ ತಮ್ಮ ಜೊತೆ ಇರುವವರನ್ನು ಬೆಳೆಸುತ್ತಾರೆ. ಅದುವೇ ಶ್ರೀಶಕ್ತಿಯ ಗುಣ. ಅಮ್ಮನಿಂದ ಹಿಡಿದು ಮಡದಿಯವರಿಗೆ, ಸೋದರಿಯಿಂದ ಪುತ್ರಿಯವರಿಗೆ ಮಹಿಳೆ ಎಂಬ ಬಲವೇ ಪುರುಷನಿಗೆ ಶಕ್ತಿ ತುಂಬುವ ಮಹಾಚೈತನ್ಯ ಎಂದರು.

ಶ್ರೀ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಜಿ ರಾಜೇಂದ್ರ ಮಾತನಾಡಿ ಮಹಿಳೆಯರು ಶಿಕ್ಷಣ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಹೆಣ್ಣು  ಕೇವಲ ವೃತ್ತಿಜೀವನವಷ್ಟೇ ಅಲ್ಲದೆ, ಕುಟುಂಬದ ಪ್ರೀತಿ, ಸಂಸ್ಕಾರ ಮತ್ತು ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಅಪ್ರತಿಮ. ಅವಳು ತಾಯಿಯಾಗಿ, ಮಗಳಾಗಿ, ಪತ್ನಿಯಾಗಿ ಮತ್ತು ಸಹೋದರಿಯಾಗಿ ನೀಡುವ ತ್ಯಾಗಕ್ಕೆ ಬೆಲೆ ಕಟ್ಟಲಾಗದು ಎಂದರು.

- Advertisement - 

  ಪ್ರಾಂಶುಪಾಲರಾದ ಡಾ. ಗೌರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಜೆ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ ಚಿಕ್ಕಣ್ಣ, ಉಪ ಪ್ರಾಂಶುಪಾಲರಾದ ಕೆ. ದಕ್ಷಿಣ ಮೂರ್ತಿ, ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥರಾದ ಬಾಬುಸಾಬಿ, ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಚೈತ್ರ ಪಿ. ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ನಂದನ, ಪ್ರಾಧ್ಯಾಪಕರಾದ ದಿವ್ಯ ಎನ್. ಪದ್ಮ ಬಿಂದುಮತ್ತಿತರರು ಹಾಜರಿದ್ದರು.

Share This Article
error: Content is protected !!
";