ರಾಗಿ ಖರೀದಿ ಕೇಂದ್ರದಲ್ಲಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳಿಂದ ರೈತರ ಶೋಷಣೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಡೂರಿನ ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರದಲ್ಲಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ರೈತರ ಶೋಷಣೆ ನಡೆಸುತ್ತಿರುವುದು ಖಂಡನೀಯ ಎಂದು ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ರ್ಯಾಕ್ಟರ್‌ಗಳಲ್ಲಿ ರಾಗಿ ತುಂಬಿಕೊಂಡು, ದಿನಗಟ್ಟಲೆ ಸಾಲಿನಲ್ಲಿ ಕಾದು ನಿಂತಿರುವ ರೈತರಿಂದ ಖರೀದಿ ನಡೆಸುವ ಬದಲು, ಲಂಚ ಕೊಟ್ಟವರಿಂದ ರಾಗಿ ಖರೀದಿಸುವ ಆರೋಪವನ್ನು ಅಧಿಕಾರಿಗಳ ವಿರುದ್ಧ ರೈತರು ಹೊರಿಸಿದ್ದಾರೆ.

- Advertisement - 

ಎಪಿಎಂಸಿ, ಧಾನ್ಯ ಖರೀದಿ ಕೇಂದ್ರಗಳು ರೈತರ ಅನುಕೂಲಕ್ಕಾಗಿ ಇದೆಯೇ ಹೊರತು ರೈತರನ್ನು ಶೋಷಣೆಗೆ ಒಳಪಡಿಸಲಲ್ಲ!

ಕರ್ನಾಟಕ ಕಾಂಗ್ರೆಸ್ ಸರ್ಕಾರ ಸ್ವತಃ ಅನ್ಯಾಯ, ಅಕ್ರಮ, ಭ್ರಷ್ಟಾಚಾರದ ಕೂಪವಾಗಿದ್ದು, ಅಧಿಕಾರಿಗಳಿಗೆ ಲೂಟಿ ಹೊಡೆಯಲು ಪರವಾನಗಿ ನೀಡಿದಂತೆ ಸರ್ಕಾರ ಕಾರ್ಯಾಚರಿಸುತ್ತಿದೆ. ತಕ್ಷಣವೇ ಈ ಸಮಸ್ಯೆಗೆ ಪರಿಹಾರ ನೀಡಿ, ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ರೈತರಿಂದ ನೇರವಾಗಿ ರಾಗಿ ಖರೀದಿ ಆಗುವಂತೆ ಕ್ರಮ ಕೈಗೊಳ್ಳಬೇಕು. ರೈತರಿಗೆ ಅನ್ಯಾಯವಾಗುವುದನ್ನು ನೋಡುತ್ತಾ, ಸುಮ್ಮನಿರಲು ಸಾಧ್ಯವೇ ಇಲ್ಲ ಎಂದು ವಿಪ ಶಾಸಕ ಸಿ.ಟಿ ರವಿ ಗುಡುಗಿದ್ದಾರೆ.

- Advertisement - 

 

 

 

 

 

Share This Article
error: Content is protected !!
";