ಒಳ ಮೀಸಲಾತಿ ವಿಳಂಬ, ಚಪ್ಪಲಿ ಹೊಲಿದು ಆಕ್ರೋಶ ವ್ಯಕ್ತಪಡಿಸಿದ ಷಡಕ್ಷರಮುನಿ ಸ್ವಾಮೀಜಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಆದಿಜಾಂಬವ ಗುರುಪೀಠದ ಶ್ರೀ ಷಡಕ್ಷರಮುನಿ ಸ್ವಾಮೀಜಿ ಅವರು ಒಳ ಮೀಸಲಾತಿ ಜಾರಿಯ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ನಡೆಸುತ್ತಿರುವ ಪಾದಯತ್ರೆಯ ಮಾರ್ಗ ಮಧ್ಯದ ಹಿರಿಯೂರಿನಲ್ಲಿ ಶ್ರೀ ಷಡಕ್ಷರಮುನಿ ಸ್ವಾಮೀಜಿ ಚಪ್ಪಲಿ ಹೊಲಿಯುವ ಮೂಲಕ ಪ್ರತಿಭಟನೆಯ ಆಕ್ರೋಶ ವ್ಯಕ್ತಪಡಿಸಿದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಆದಿಜಾಂಬವ ಗುರುಪೀಠದ ಶ್ರೀ ಷಡಕ್ಷರಮುನಿ ಸ್ವಾಮೀಜಿ ಅವರು ಒಳಮೀಸಲಾತಿ ಜಾರಿಯ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರದ ವಿಳಂಬ ನೀತಿ ವಿರೋಧಿಸಿ ನಡೆಸುತ್ತಿರುವ ಪಾದಯತ್ರೆ ಯಲ್ಲಿ ಸಾಮಾಜಿಕ ಸಾಮರಸ್ಯ ವೇದಿಕೆಯ ವಾದಿರಾಜ್ ಅವರು ಪಾಲ್ಗೊಂಡು ಬೆಂಬಲ ಸೂಚಿಸಿದರು.

- Advertisement - 

ಮಾರ್ಚ್ 11ರಂದು ಹರಿಹರ ಸಮೀಪದ ಡಿಎಸ್ಸೆಸ್ ಸಂಸ್ಥಾಪಕರಾದ ಬಿ.ಕೃಷ್ಣಪ್ಪನವರ ಸ್ಮೃತಿ ಸ್ಥಳದಿಂದ ಆರಂಭವಾದ ಪಾದಯಾತ್ರೆ ಮಂಗಳವಾರ ಹಿರಿಯೂರಿನಿಂದ ಪಟ್ರೆಹಳ್ಳಿ, ಆದಿವಾಲ ಗ್ರಾಮಗಳ ಮೂಲಕ ಬೆಂಗಳೂರಿನತ್ತ ಹೊರಟಿತು.
ಪಾದಯತ್ರೆಯಲ್ಲಿ ತುಮಕೂರಿನ ಯೋಗೀಶ್ ಮತ್ತು ಧರ್ಮಣ್ಣ ಮತ್ತಿತರರು ಇದ್ದರು.

- Advertisement - 

 

Share This Article
error: Content is protected !!
";