ದೇವದಾಸಿ ಪದ್ದತಿ ನಿರ್ಮೂಲನೆ ಕುರಿತು ಬೀದಿ ನಾಟಕ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ದೇವದಾಸಿ ಪದ್ದತಿ ನಿರ್ಮೂಲನೆ ಕುರಿತು ಕುಂಚಿಗನಾಳ್ ಗ್ರಾಮದಲ್ಲಿ ಮಾರುತಿ ಸಾಂಸ್ಕೃತಿಕ ಕಲಾ ತಂಡದವರು ಬೀದಿ ನಾಟಕ ಪ್ರದರ್ಶಿಸಿದರು.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ ಬೆಂಗಳೂರು, ದೇವದಾಸಿ ಪುನರ್ವಸತಿ ಯೋಜನೆ ಚಿತ್ರದುರ್ಗ ಇವುಗಳ ಸಂಯುಕ್ತಾಶ್ರಯದಲ್ಲಿ ಪ್ರದರ್ಶನಗೊಂಡ ಬೀದಿ ನಾಟಕ ಉದ್ಘಾಟಿಸಿ ಮಾತನಾಡಿದ ಯೋಜನಾಧಿಕಾರಿ ಷಣ್ಮುಖಪ್ಪ ದೇವದಾಸಿಯರ ಬಗ್ಗೆ ಇನ್ನು ಜೀವಂತವಾಗಿರುವ ಮೂಢನಂಬಿಕೆ, ಕಂದಾಚಾರಗಳನ್ನು ತೊಡೆದು ಹಾಕಬೇಕಾಗಿರುವುದರಿಂದ ಜನತೆ ಜಾಗೃತರಾಗಬೇಕೆಂದು ಹೇಳಿದರು.

- Advertisement - 

ಕಲಾವಿದರಾದ ಜಿ.ವಿ.ಮಾರುತೇಶ್, ಸುಕನ್ಯ, ವಿರುಪಾಕ್ಷಪ್ಪ, ಜಿ.ಎನ್.ಗೊಂಡಾಳಪ್ಪ, ಮಹಾಂತೇಶ್, ಹೇಮಂತ್, ದೇವದಾಸಿ ಪುನರ್ವಸತಿ ಯೋಜನೆಯ ದ್ಯಾಮಣ್ಣ ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

 

- Advertisement - 

 

Share This Article
error: Content is protected !!
";