ರಾಷ್ಟ್ರಮಟ್ಟದ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ನಲ್ಲಿ 2ನೇ ಸ್ಥಾನ ಪಡೆದ ಸತೀಶ್‌ ಕುಮಾರ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಪಂಜಾಬ್‌ನ ಗುರುಕಾಶಿ ವಿಶ್ವವಿದ್ಯಾನಿಲಯದ ಭಟಿಂಡ ಕ್ರೀಡಾಂಗಣದಲ್ಲಿ ಮಾ.೧೪ ರಿಂದ ೧೬ ರವರೆಗೆ ಮೂರು ದಿನಗಳ ಕಾಲ ನಡೆದ ೪೫ ನೆ ರಾಷ್ಟ್ರಮಟ್ಟದ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಸತೀಶ್‌ಕುಮಾರ್ ಯು. ನೂರು ಮೀಟರ್ ಓಟದಲ್ಲಿ ಎರಡನೆ ಸ್ಥಾನ
, ಇನ್ನೂರು ಮೀ. ಓಟದಲ್ಲಿ ಮೊದಲ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಚಿತ್ರದುರ್ಗದಲ್ಲಿ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿರುವ ಸತೀಶ್‌ಕುಮಾರ್ ಯು. ಐವತ್ತು ವರ್ಷದೊಳಗಿನ ಮೇಲ್ಪಟ್ಟವರಿಗಾಗಿ ನಡೆದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಐದು ಪ್ರಶಸ್ತಿ ಪದಕಗಳನ್ನು ಬಾಚಿಕೊಂಡು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

- Advertisement - 

 

 

- Advertisement - 

 

Share This Article
error: Content is protected !!
";