ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಡಾ. ಜೆ. ರಾಜು ಬೇತೂರು ಪಾಳ್ಯ
ಚಂದ್ರವಳ್ಳಿ ನ್ಯೂಸ್, ನವದೆಹಲಿ: ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ದೆಹಲಿಯ ಅವರ ಗೃಹ ಕಚೇರಿಯಲ್ಲಿ ವಿಶ್ರಾಂತ ಡೆಪ್ಯೂಟಿ ಕಮಿಷನರ್ ಡಾ. ಜೆ. ರಾಜು ಬೇತೂರು ಪಾಳ್ಯ ಹಾಗೂ ಅವರ ಸ್ನೇಹಿತರ ತಂಡ ಭೇಟಿ ಮಾಡಿ ಮಾತುಕತೆ ನಡೆಸಿತು.
ಈ ಸೌಹಾರ್ದಯುತ ಭೇಟಿಯ ಸಂದರ್ಭದಲ್ಲಿ, ಸಮಾಜದ ಪ್ರಸ್ತುತ ಸ್ಥಿತಿಗತಿಗಳು ಹಾಗೂ ರಾಜ್ಯದ ಇತ್ತೀಚಿನ ರಾಜಕೀಯ ವಿದ್ಯಾಮಾನಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.
ಸಮಾಜದ ಅಭಿವೃದ್ಧಿಗೆ ಪೂರಕವಾದ ಅಂಶಗಳು ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಕೇಂದ್ರ ಸಚಿವರೊಂದಿಗೆ ತಂಡವು ವಿಚಾರ ವಿನಿಮಯ ಮಾಡಿಕೊಂಡಿತು.
ಭೇಟಿಯ ವೇಳೆ ಡಾ. ಜೆ. ರಾಜು ಬೇತೂರು ಪಾಳ್ಯ ಮತ್ತು ಅವರ ಆತ್ಮೀಯ ಗೆಳೆಯರು ಉಪಸ್ಥಿತರಿದ್ದರು.

