ಮಾವು ಬೇವು ಹೊಂಗೆ ಅರಳೆ ಆಲ ಉಪ್ಪಿಗೆ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಾವು ಬೇವು ಹೊಂಗೆ
ಅರಳೆ ಆಲ ಉಪ್ಪಿಗೆ
ಅತ್ತಿ ಅಶ್ವತ ಕರಟಿಗೆ
ಚಿಗುರಿ ಕಾದಿವೆ
ನವ ಸಂವತ್ಸರದ ಉಗಾದಿಗೆ…!
ಮಾವು ಬೇವಿನ ತೋರಣ
ಎಣ್ಣೆ ಸ್ನಾನ ಅಭ್ಯುಂಜನ
ಗುರು ಹಿರಿಯರನು ನೆನೆಯೋಣ
ಸಂಬಂಧಗಳನು ಬೆಸೆಯೋಣ
ಉಗಾದಿ ಆಚರಣೆ ಮಾಡೋಣ…!
ಸಿಹಿ ಹೋಳಿಗೆಯ ಊರಣ
ಬೇವು ಬೆಲ್ಲದ ಮಿಶ್ರಣ
ಪ್ರೀತಿಯಿಂದ ಹಂಚೋಣ
ಉಯ್ಯಾಲೆಯಾಡಿ ನಲಿಯೋಣ
ಉಗಾದಿ ಆಚರಣೆ ಮಾಡೋಣ…!
ಕವಿತೆ: ವೇಣುಕುಮಾರ್. ಎಂ

