ಲಕ್ಷ ಲಕ್ಷ ಕೋಟಿ ಬಜೆಟ್…  ಯೋಜನೆಗಳು ಮಾತ್ರ ಅಪೂರ್ಣ?

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲಕ್ಷ ಲಕ್ಷ ಕೋಟಿ ಬಜೆಟ್ಆದರೆ ಯೋಜನೆಗಳು ಮಾತ್ರ ಅಪೂರ್ಣ?

2ಬಜೆಟ್ ಭಾಷಣ ಅಲ್ಲ, ಲೆಕ್ಕ ಬೇಕು! ಜನರ ಹಣ ಎಲ್ಲಿ ಹೋಗುತ್ತಿದೆ?”.
3
ಘೋಷಣೆಗಳ ಮಳೆಅಭಿವೃದ್ಧಿಯ ಬರ! ಬಜೆಟ್ ಹಿಂದೆ ಇರುವ ನಿಜ ಏನು?”.
4
ಪ್ರತಿ ವರ್ಷ ಕೋಟಿ ಕೋಟಿ ಬಜೆಟ್ಆದರೆ  ಯೋಜನೆಗಳು ಯಾಕೆ ಮುಗಿಯುತ್ತಿಲ್ಲ?”.

- Advertisement - 

5ಸಾಲ ಮಾಡುತ್ತಾ ತೆರಿಗೆ ಹೆಚ್ಚಿಸಿ ಬಜೆಟ್ ಮಂಡನೆ ಇದು ಅಭಿವೃದ್ಧಿಯಾ ಅಥವಾ ಅಂಕಿಗಳ ಆಟವಾ?”.
6
ಹೊಸ ಬಜೆಟ್ ಮೊದಲು ಹಳೆಯದಕ್ಕೆ ಲೆಕ್ಕ ಕೊಡಿ ಜನರ ಹಣಕ್ಕೆ ಜನರೇ ಮಾಲೀಕರು!”.
7
ಬಜೆಟ್ ದೊಡ್ಡದುಫಲಿತಾಂಶ ಸಣ್ಣದು! ಜನರಿಗೆ ಪಾರದರ್ಶಕತೆ ಬೇಕು”. “ಬಜೆಟ್ ಭಾಷಣವೇ ಸಾಧನೆನಾ? ಇಲ್ಲ ಜನರ ಮುಂದೆ ಲೆಕ್ಕ ಕೊಡುವ ಹೊಣೆಗಾರಿಕೆಯಾ?”.

ಪ್ರತಿ ವರ್ಷವೂ ಸರ್ಕಾರಗಳು ಬಜೆಟ್ ಮಂಡನೆ ಮಾಡುವಾಗ ಲಕ್ಷಾಂತರ ಕೋಟಿ ರೂಪಾಯಿಗಳ ಬಜೆಟ್ ಘೋಷಣೆ ಮಾಡುತ್ತವೆ. ವಿವಿಧ ಇಲಾಖೆಗಳಿಗೂ ಸಾವಿರಾರು ಕೋಟಿ ಅನುದಾನಗಳನ್ನು ಘೋಷಿಸಿ ಅಭಿವೃದ್ಧಿಯ ಭರವಸೆ ನೀಡಲಾಗುತ್ತದೆ. ಆದರೆ ಒಂದು ಮೂಲ ಪ್ರಶ್ನೆ ಜನಸಾಮಾನ್ಯರ ಮನಸ್ಸಿನಲ್ಲಿ ಈಗಾಗಲೇ ಮೂಡಿದೆ. ಈ ಎಲ್ಲಾ ಹಣ ಎಲ್ಲಿಗೆ ಹೋಗುತ್ತಿದೆ?.

- Advertisement - 

ಹತ್ತುಹದಿನೈದು ವರ್ಷಗಳ ಹಿಂದೆ ಆರಂಭವಾದ ಬೃಹತ್ ನೀರಾವರಿ ಯೋಜನೆಗಳು, ಉದಾಹರಣೆಗೆ ಅಪ್ಪರ್ ಭದ್ರ ಯೋಜನೆ ಮತ್ತು ಎತ್ತಿನಹೊಳೆ ಯೋಜನೆ, ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಪ್ರತಿ ಬಜೆಟ್ಟಿನಲ್ಲೂ ಈ ಯೋಜನೆಗಳಿಗೆ ಮತ್ತೆ ಮತ್ತೆ ಅನುದಾನ ಘೋಷಣೆ ಮಾಡಲಾಗುತ್ತದೆ. ಆದರೆ ನೆಲಮಟ್ಟದಲ್ಲಿ ವಾಸ್ತವಾಗಿ ನೋಡಿದರೆ ಅನೇಕ ಯೋಜನೆಗಳು ಹಿಂದಿನಂತೆಯೇ ಅರ್ಧದಲ್ಲೇ ನಿಂತಿರುವುದು ಕಾಣಿಸುತ್ತದೆ.

ಇದರಿಂದ ಜನರಲ್ಲಿ ಒಂದು ಗಂಭೀರ ಪ್ರಶ್ನೆ ಮೂಡುತ್ತದೆ:
ಬಜೆಟ್ ಘೋಷಣೆಗಳು ಕೇವಲ ಕಾಗದದ ಮೇಲಿನ ಅಂಕಿಗಳ ಆಟವೇ?. ಅಥವಾ ನಿಜವಾಗಿಯೂ ಜನರ ಬದುಕಿನಲ್ಲಿ ಬದಲಾವಣೆ ತರಲು ಮಾಡಿದ ಯೋಜನೆಗಳೇ?.
ಸರ್ಕಾರ ಹೊಸ ಬಜೆಟ್ ಮಂಡನೆ ಮಾಡುವ ಮೊದಲು, ಹಿಂದಿನ ವರ್ಷದ ಬಜೆಟ್‌ನ ಸಂಪೂರ್ಣ ಲೆಕ್ಕಾಚಾರವನ್ನು ಜನರ ಮುಂದೆ ಇಡುವುದು ಅಗತ್ಯ.   ಅಧಿವೇಶನದಲ್ಲಿ ದೊಡ್ಡ ಸ್ಕ್ರೀನ್ ಮೂಲಕ ಪಿಪಿಟಿ ಯೊಂದಿಗೆ ಸ್ಪಷ್ಟ ವರದಿ ಮೂಲಕ ಜನತೆಗೆ ನೇರವಾಗಿ ತಿಳಿಸಬೇಕು.

ಯಾವ ಇಲಾಖೆಗೆ ಎಷ್ಟು ಅನುದಾನ ನೀಡಲಾಯಿತು?. ಯಾವ ಯೋಜನೆಗಳಿಗೆ ಎಷ್ಟು ಹಣ ಬಿಡುಗಡೆ ಮಾಡಲಾಯಿತು?. ಯಾವ ಕಾಮಗಾರಿಗಳು ಪೂರ್ಣಗೊಂಡಿವೆ?. ಯಾವ ಯೋಜನೆಗಳು ಇನ್ನೂ ಅರ್ಧದಲ್ಲೇ ನಿಂತಿವೆ?. ಅವು ಮುಗಿಯದ ಕಾರಣವೇನು?.

ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಿದ ನಂತರವೇ ಹೊಸ ಬಜೆಟ್ ಮಂಡನೆ ಆಗಬೇಕು. ಇಲ್ಲದಿದ್ದರೆ ವರ್ಷಕ್ಕೊಮ್ಮೆ ಎರಡುಮೂರು ಗಂಟೆಗಳ ಬಜೆಟ್ ಭಾಷಣ ಮಾಡಿ ಘೋಷಣೆಗಳ ಸುರಿಮಳೆ ಸುರಿಸುವುದೇ ದೊಡ್ಡ ಸಾಧನೆ ಅಲ್ಲ.0

ಇನ್ನೊಂದು ಗಂಭೀರ ವಿಚಾರವೆಂದರೆ, ಪ್ರತಿ ವರ್ಷವೂ ಸರ್ಕಾರಗಳು ಲಕ್ಷಾಂತರ ಕೋಟಿ0 ಸಾಲ ಮಾಡುತ್ತಿವೆ. ಅದೇ ಸಮಯದಲ್ಲಿ ಜನರ ಮೇಲೆ ಹೊಸ0 ತೆರಿಗೆಗಳ ಭಾರ ಕೂಡ ಹೆಚ್ಚುತ್ತಿದೆ. ಹೀಗಿರುವಾಗ ಈ ಬಜೆಟ್ ನಿಜವಾಗಿಯೂ ಅಭಿವೃದ್ಧಿಗಾಗಿ ಇದೆಯಾ? ಅಥವಾ ಕೇವಲ ಅಂಕಿಗಳ ಘೋಷಣೆಗಾಗಿ ಇದೆಯಾ ಎಂಬ ಪ್ರಶ್ನೆ ಸಹಜವಾಗಿಯೇ ಜನರ0 ಮನಸ್ಸಿನಲ್ಲಿ ಮೂಡುತ್ತದೆ.

ನಿಜವಾದ ಅಭಿವೃದ್ಧಿ ಎಂದರೆ ಬಜೆಟ್ ಅಂಕಿಗಳು ದೊಡ್ಡದಾಗಿರುವುದಲ್ಲ, ಆ ಹಣದಿಂದ ಯೋಜನೆಗಳು ಸಮಯಕ್ಕೆ ಮುಗಿದು ಜನರಿಗೆ ಪ್ರಯೋಜನವಾಗುವುದು. ಆದ್ದರಿಂದ ಸರ್ಕಾರಗಳು ಬಜೆಟ್ ಮಂಡನೆ ಮಾಡುವಾಗ ಕೇವಲ ಭರವಸೆ ನೀಡುವುದಲ್ಲ, ಜನರ ಮುಂದೆ ಸಂಪೂರ್ಣ ಪಾರದರ್ಶಕತೆ ತೋರಬೇಕು. ಹಿಂದಿನ ಬಜೆಟ್‌ನ ಲೆಕ್ಕವನ್ನು ಬಹಿರಂಗವಾಗಿ ಹೇಳಿ, ನಂತರ ಹೊಸ ಬಜೆಟ್ ಮಂಡನೆ ಮಾಡಿದಾಗ ಮಾತ್ರ ಅದು ಜನಪರ ಮತ್ತು ಹೊಣೆಗಾರಿಕೆಯ ಆಡಳಿತ ಎನ್ನಿಸಿಕೊಳ್ಳುತ್ತದೆ.

ಇಲ್ಲದಿದ್ದರೆ ವರ್ಷ ವರ್ಷ ಲಕ್ಷ ಲಕ್ಷ ಕೋಟಿ ಬಜೆಟ್ ಘೋಷಣೆ ಮಾಡುವುದು ಅಭಿವೃದ್ಧಿಯ ಸಂಕೇತವಲ್ಲ, ಅದು ಕೇವಲ ಅಂಕಿಗಳ ಆಟವಾಗಿಯೇ ಉಳಿಯುತ್ತದೆ.
ಲೇಖನ:ಶ್ರೀನಿವಾಸ್ ಕೆ ಟಿ, ಬೆಂಗಳೂರು.

 

 

 

Share This Article
error: Content is protected !!
";