ಹಣ ಕೊಟ್ಟರೆ ಡಾಕ್ಟರೇಟ್ ಸಿಗುವ ಕಾಲ ಬಂದಿದೆಯಾ?

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಧನೆ ಇಲ್ಲದೆ ಡಾಕ್ಟರ್ ಪಟ್ಟ ಇದು ಗೌರವದ ಹತ್ಯೆಯೇ?”. ಹಣ ಕೊಟ್ಟರೆ ಡಾಕ್ಟರೇಟ್ ಸಿಗುವ ಕಾಲವು ಬಂದಿದೆಯ?”. ಡಾಕ್ಟರೇಟ್ ಪದವಿ ಗೌರವವೇಅಥವಾ ಸಂತೆಯಲ್ಲಿ ಮಾರಾಟವಾಗುವ ಸರಕೇ?. ಸಾಧನೆ ಇಲ್ಲದೆ ಡಾಕ್ಟರ್ಪಟ್ಟ ಸಿಗುತ್ತಿದೆಯೇಇದು ಗೌರವದ ಅವಮಾನವಲ್ಲವೇ?.

ಯಾವ ಸಾಧನೆ ಮಾಡಿ ಡಾಕ್ಟರೇಟ್ ಪಡೆಯುತ್ತಿದ್ದಾರೆಅಥವಾ ಹಣ ಕೊಟ್ಟು ಕೊಂಡುಕೊಳ್ಳುತ್ತಿದಾರಾ?. ಡಾಕ್ಟರೇಟ್ ಕೊಡುವವರು ಯಾರುಅವರ ಮಾನ್ಯತೆ ಏನು?. ತಮಗೆ ತಾವೇ ವೇದಿಕೆ ಕಟ್ಟಿಕೊಂಡು ಡಾಕ್ಟರ್ ಎಂದು ಕರೆಸಿಕೊಳ್ಳುವುದರಿಂದ ಗೌರವ ಬರುತ್ತದೆಯೇ?. ನಿಜವಾದ ಸಂಶೋಧಕರಿಗೆ ಸಿಗಬೇಕಾದ ಗೌರವವನ್ನು ನಕಲಿ ಡಾಕ್ಟರೇಟ್ ಕಸಿದುಕೊಳ್ಳುತ್ತಿದೆಯೇ?.

- Advertisement - 

ಡಾಕ್ಟರೇಟ್ ಪದವಿ ಎನ್ನುವುದು ಸಾಮಾನ್ಯ ಪದವಿ ಅಲ್ಲ. ಇದು ಒಂದು ವ್ಯಕ್ತಿಯ ಅಪಾರ ಸಾಧನೆ, ಸಂಶೋಧನೆ, ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆಗಳಿಗೆ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಗೌರವದಿಂದ ನೀಡುವ ಅತ್ಯುನ್ನತ ಮಾನ್ಯತೆ. ಹಿಂದೆ ಈ ಪದವಿ ಪಡೆದವರು ಸಮಾಜದ ಮುಂದೆ ಮಾದರಿಗಳಾಗಿ ನಿಂತಿದ್ದರು. ಅವರ ಜೀವನವೇ ಸಾಧನೆಯ ಪ್ರತೀಕವಾಗಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಕಡೆ ಕಾಣುತ್ತಿರುವ ಬೆಳವಣಿಗೆಗಳು ಆತಂಕಕಾರಿಯಾಗಿವೆ. ಡಾಕ್ಟರೇಟ್ ಎಂಬ ಮಹತ್ತರ ಗೌರವವೇ ಕೆಲವರ ಕೈಯಲ್ಲಿ ಕೇವಲ ಪ್ರದರ್ಶನದ ವಸ್ತುವಾಗಿ ಬದಲಾಗುತ್ತಿರುವಂತೆ ಕಾಣುತ್ತಿದೆ. ಏನೂ ವಿಶೇಷ ಸಾಧನೆ ಮಾಡದ ಕೆಲವರು ಸಹ ಡಾಕ್ಟರ್ಎಂಬ ಪದವಿಯನ್ನು ಹಣಕೊಟ್ಟು ಅಥವಾ ಅನುಮಾನಾಸ್ಪದ ಸಂಸ್ಥೆಗಳ ಮೂಲಕ ಪಡೆದುಕೊಂಡು ಅದ್ದೂರಿ ಕಾರ್ಯಕ್ರಮಗಳನ್ನು ಮಾಡಿ ತಮಗೆ ತಾವೇ ವೈಭವಿಕರಿಸಿಕೊಳ್ಳುತ್ತಿರುವ ದೃಶ್ಯಗಳು ಹೆಚ್ಚಾಗುತ್ತಿವೆ.

- Advertisement - 

ಒಂದು ಕ್ಷಣ ಯೋಚಿಸಬೇಕು- ಡಾಕ್ಟರೇಟ್ ಪದವಿ ಕೊಡುವ ಸಂಸ್ಥೆ ಯಾರು?. ಅದು ಮಾನ್ಯತೆ ಪಡೆದ ವಿಶ್ವವಿದ್ಯಾಲಯವೇ?. ಅವರು ಯಾವ ಸಾಧನೆಯನ್ನು ನೋಡಿ ಈ ಪದವಿ ಕೊಡುತ್ತಿದ್ದಾರೆ?. ಸಮಾಜಕ್ಕೆ ನೀಡಿದ ಕೊಡುಗೆ ಏನು?.

ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಇಲ್ಲದಿದ್ದರೆ, ಅಂತಹ ಡಾಕ್ಟರೇಟ್ಪದವಿಗಳ ಅರ್ಥವೇನು? ಕೇವಲ ಒಂದು ಪ್ರಮಾಣಪತ್ರ ಮತ್ತು ಒಂದು ಅದ್ದೂರಿ ವೇದಿಕೆ ನಿರ್ಮಿಸಿ ನಾನು ಡಾಕ್ಟರ್ಎಂದು ಹೇಳಿಕೊಳ್ಳುವುದರಿಂದ ಆ ಪದವಿಗೆ ಗೌರವ ಬರುತ್ತದೆಯೇ?.

ನಿಜವಾದ ಡಾಕ್ಟರೇಟ್ ಪದವಿ ಎಂದರೆ ಕಠಿಣ ಪರಿಶ್ರಮ, ಸಂಶೋಧನೆ ಮತ್ತು ಸಮಾಜಕ್ಕೆ ನೀಡಿದ ವಿಶಿಷ್ಟ ಸೇವೆಯ ಫಲ. ಆದರೆ ಅದು ಕೆಲವರ ಕೈಯಲ್ಲಿ ಕೇವಲ ಹೆಸರಿನ ಮುಂದೆ ಸೇರಿಸಿಕೊಳ್ಳುವ ಅಲಂಕಾರಿಕ ಪದ ಆಗಿ ಬದಲಾಗುತ್ತಿರುವುದು ದುರಂತಕರ.

ಇಂತಹ ಬೆಳವಣಿಗೆಗಳು ಮುಂದುವರಿದರೆ ನಿಜವಾದ ಸಾಧಕರಿಗೆ ದೊರೆಯಬೇಕಾದ ಗೌರವವೇ ಕುಗ್ಗುವ ಅಪಾಯ ಇದೆ. ಆದ್ದರಿಂದ ಸಮಾಜವೇ ಎಚ್ಚರಿಕೆಯಿಂದಿರಬೇಕು. ಯಾರು ಯಾವ ಸಂಸ್ಥೆಯಿಂದ ಡಾಕ್ಟರೇಟ್ ಪಡೆದಿದ್ದಾರೆ, ಅದರ ಹಿನ್ನೆಲೆ ಏನು ಎಂಬುದನ್ನು ಪ್ರಶ್ನಿಸುವುದು ಅಗತ್ಯ.

ಗೌರವ ಎನ್ನುವುದು ಹಣಕ್ಕೆ ಕೊಳ್ಳುವ ವಸ್ತುವಲ್ಲ. ಸಾಧನೆಯಿಂದಲೇ ಗಳಿಸಬೇಕಾದ ಅಮೂಲ್ಯ ಮಾನ್ಯತೆ ದುಡ್ಡಿಂದ ಅಲ್ಲ……
ಲೇಖನ-ಶ್ರೀನಿವಾಸ್ ಕೆ ಟಿ, ಬೆಂಗಳೂರು.

 

 

Share This Article
error: Content is protected !!
";