3-4 ದಿನಗಳಲ್ಲಿ ಶೇಂಗಾ ಬೆಳೆ ವಿಮೆ ಜಮೆ- ಸಚಿವ ಡಿ.ಸುಧಾಕರ್ ಭರವಸೆ​

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ಮುಂಗಾರು ಹಂಗಾಮಿನ ಶೇಂಗಾ ಬೆಳೆ ವಿಮೆ ವಿಳಂಬವಾಗುತ್ತಿರುವುದಕ್ಕೆ ರೈತರು ಆತಂಕಪಡುವ ಅಗತ್ಯವಿಲ್ಲ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ವಿಮಾ ಹಣ ರೈತರ ಖಾತೆಗೆ ಜಮೆಯಾಗಲಿದೆ ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಭರವಸೆ ನೀಡಿದ್ದಾರೆ.

​ಶೇಂಗಾ ಬೆಳೆ ವಿಮೆ ಪಾವತಿಯಲ್ಲಿ ವಿಮಾ ಕಂಪನಿಗಳು ಅನುಸರಿಸುತ್ತಿರುವ ವಿಳಂಬ ನೀತಿಯಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ರೈತ ಸಂಘದ ಮುಖಂಡರು ಸಚಿವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿದ ಸಚಿವರು, ಬೆಳೆ ವಿಮಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿದರು.

- Advertisement - 

​ಕೃಷಿ ಆಯುಕ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ರೈತರ ಖಾತೆಗೆ ನೇರವಾಗಿ ವಿಮಾ ಮೊತ್ತ ತಲುಪಲಿದೆ ಎಂದು ಜಿಲ್ಲಾಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

​ಸಚಿವರಿಗೆ ಗೌರವ ಸಮರ್ಪಣೆ-
​ಇದೇ ವೇಳೆ
, ತೊಗರಿ ಬೆಳೆ ವಿಮೆಯ ಮಧ್ಯಂತರ ಪರಿಹಾರ ಮಂಜೂರು ಮಾಡುವಲ್ಲಿ ವಿಶೇಷ ಆಸಕ್ತಿ ವಹಿಸಿ ಸಹಕರಿಸಿದ ಸಚಿವ ಡಿ.ಸುಧಾಕರ್ ಅವರಿಗೆ ಸಂಘದ ವತಿಯಿಂದ ಆತ್ಮೀಯವಾಗಿ ಗೌರವ ಸಮರ್ಪಿಸಲಾಯಿತು.​
ಈ ಸಂದರ್ಭದಲ್ಲಿ ರೈತ ಮುಖಂಡರಾದ ಡಾ. ಸಿ. ಶಿವಲಿಂಗಪ್ಪ
, ಪ್ರೊ. ವೀರಣ್ಣ, ಪ್ರೊ. ಎಂ. ಶಿವಲಿಂಗಪ್ಪ, ಗೋಪನಹಳ್ಳಿ ತಮ್ಮೇಗೌಡ, ಎಲ್.ಐ.ಸಿ. ತಿಪ್ಪೇಸ್ವಾಮಿ, ಹೆಗ್ಗರೆ ಶರಣಪ್ಪ ಹಾಗೂ ಕುರಡಿಹಳ್ಳಿ ಸಂದೀಪ್ ಸೇರಿದಂತೆ ಹಲವರು ಹಾಜರಿದ್ದರು.

- Advertisement - 

 

Share This Article
error: Content is protected !!
";