ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ನಾವೆಲ್ಲ ಅಣ್ಣ-ತಮ್ಮಂದಿರ ರೀತಿ ಇದ್ದೇವೆ. ನಾವು ಕಾಂಗ್ರೆಸ್ ಕುಟುಂಬದವರು ಎಂದು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಡಿ. ಕೆ. ಶಿವಕುಮಾರ್ ನಿವಾಸಕ್ಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಆಗಮಿಸಿ ಚರ್ಚೆ ನಡೆಸಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ ಅವರ ಪರವಾಗಿ ಡಿಸಿಎಂ ಡಿ. ಕೆ. ಶಿವಕುಮಾರ್ ಅವರಿಂದ ಸದಾಶಿವನಗರ ನಿವಾಸದಲ್ಲಿ ಬಿ ಫಾರಂ ಸ್ವೀಕರಿಸಿದರು.
ಬಳಿಕ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ನಾವು ಅಣ್ಣ ತಮ್ಮಂದಿರ ರೀತಿಯಲ್ಲಿ ಇದ್ದೇವೆ. ನಾವು ಕಾಂಗ್ರೆಸ್ ಕುಟುಂಬದವರು. 40 ವರ್ಷ ನನ್ನ ತಂದೆ ಕಾಂಗ್ರೆಸ್ ಪಕ್ಷದಲ್ಲಿ ದುಡಿದಿದ್ದಾರೆ. ನಮ್ಮ ಕಾಂಗ್ರೆಸ್ ಪಕ್ಷದ ವತಿಯಿಂದಟಿಕೆಟ್ ಘೋಷಣೆ ಆಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಸೇರಿದಂತೆ ಹಿರಿಯ ನಾಯಕರು ಒಗ್ಗಟ್ಟಿಂದ ಕೆಲಸ ಮಾಡಲು ತೀರ್ಮಾನ ಮಾಡಿದ್ದಾರೆ. ಸಮರ್ಥ್ಗೆ ಬಿ ಪಾರಂ ನೀಡಿದ್ದಾರೆ. ಎಲ್ಲಾ ನಾಯಕರಿಗೆ ತುಂಬು ಹೃದಯದಧನ್ಯವಾದಗಳು. ನಿನ್ನೆ ರಾಜಿ ಸಂಧಾನಆಗಿದೆ. ಹೈಕಮಾಂಡ್ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.
ಎಲ್ಲರ ಒಮ್ಮತ ಇದೆ:
ಇದೇ ವೇಳೆ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಮಾತನಾಡಿ, ದಾವಣಗೆರೆ ದಕ್ಷಿಣ, ಬಾಗಲಕೋಟೆ ಟಿಕೆಟ್ ಘೋಷಣೆ ಆಗಿದೆ. ದಾವಣಗೆರೆ ದಕ್ಷಿಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತ ನಾಯಕರಾದ ಸಚಿವ ಜಮೀರ್ ಅಹಮದ್, ಸಲೀಂ, ಹ್ಯಾರೀಸ್, ಜಬ್ಬಾರ್ ಜೊತೆ ಮಾತನಾಡಿ ಒಮ್ಮತದ ತೀರ್ಮಾನಕ್ಕೆ ಬಂದಿದ್ದೇವೆ. ಪಕ್ಷದ ಸಂಪ್ರದಾಯದಂತೆ ಮೃತ ಶಾಸಕರ ಕುಟುಂಬಕ್ಕೆ ಟಿಕೆಟ್ ಕೊಡಲಾಗಿದೆ ಎಂದು ಡಿಸಿಎಂ ತಿಳಿಸಿದರು.
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಗೆ ಡಿಸಿಎಂ ಹಾಗೂ ಸಿಎಂ ಹೋಗುತ್ತೇವೆ. ಇಬ್ಬರು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗುತ್ತೇವೆ. ಬುಧವಾರ ಸಾಯಂಕಾಲ ಸಿಎಲ್ಪಿ ಸಭೆ ಕರೆಯಲಾಗಿದೆ. ಟಿಕೆಟ್ ವಿಚಾರದಲ್ಲಿ ವಿಭಿನ್ನವಾಗಿ ಚರ್ಚೆಯಾಗ್ತಿತ್ತು, ಅದಕ್ಕೆ ತೆರೆ ಎಳೆದಿದ್ದೇವೆ. ಅಲ್ಪಸಂಖ್ಯಾತರು ಟಿಕೆಟ್ ಕೇಳೋದ್ರಲ್ಲಿ ತಪ್ಪಿಲ್ಲ. ಅವರ ಜನಸಂಖ್ಯೆಗೆ ಅನುಗುಣವಾಗಿ ಕೇಳಿದ್ದಾರೆ. ವಿತ್ ಡ್ರಾ ಮಾಡೋಕೆ ರೆಡಿ ಇದ್ದೇನೆ ಎಂದು ಮಲ್ಲಿಕಾರ್ಜುನ ಅವರು ಹೇಳಿದ್ರು. ಸಮರ್ಥ್ ಅವರ ತಾಯಿ ಅವರನ್ನು ಎಂಪಿ ಎಲೆಕ್ಷನ್ಗೆ ನಾವೇ ಬಲವಂತವಾಗಿ ನಿಲ್ಲಿಸಿದ್ದೆವು ಎಂದರು.
ದಾವಣಗೆರೆಯಲ್ಲಿ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ಕೊಡಬೇಕಂತ ನನಗೂ ಆಸೆ ಇತ್ತು. ಕುಟುಂಬದಲ್ಲಿ ಆ ರೀತಿ ಆಸೆ ಇದ್ದಾಗ, ಬೇರೆಯವರು ಕೇಳಿದ್ರು. ನಂಬಿಕೆ ಮೇಲೆ ಶುಕ್ರವಾರ ಸಮರ್ಥ್ ನಾಮಪತ್ರ ಹಾಕಿದ್ದರು. ಪಕ್ಷ ಹೇಳಿದಂತೆ, ಎಲ್ಲರೂ ಫಾಲೋ ಮಾಡ್ತಾರೆ. ಅದನ್ನು ಮಲ್ಲಿಕಾರ್ಜುನ ಸಹ ಹೇಳಿದ್ದಾರೆ. ಆದರೆ ಎಲ್ಲರ ಒಮ್ಮತ ಇದೆ ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.
ಬಿಜೆಪಿಯಲ್ಲಿ ಗಲಾಟೆ ಇಲ್ವಾ? ಎಂದು ಪ್ರಶ್ನಿಸಿದ ಡಿಕೆ ಶಿವಕುಮಾರ್, ಅದಕ್ಕೆ ದಾವಣಗೆರೆಯಲ್ಲಿ ಮೂರನೇ ವ್ಯಕ್ತಿಗೆ ಟಿಕೆಟ್ ಕೊಟ್ಟಿದ್ದಾರೆ. ದಾವಣಗೆರೆ ಅಭಿವೃದ್ಧಿ ಆಗಿದೆ. ದಾವಣಗೆರೆಯಲ್ಲಿ ಜಬ್ಬಾರ್ಗೆ ಮೂರು ಬಾರಿ ಎಂಎಸ್ಸಿ ಮಾಡಿದ್ದೆವು. ಅವರ ಕ್ಲೇಮ್ ಇರೋದಕ್ಕೆ ನಾವು ಎಂಎಲ್ಸಿ ಮಾಡಿದ್ದೆವು. ಸಲೀಂಗೆ ಎಂಎಲ್ಸಿ ಮಾಡಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರ ಪರವಾಗಿ ಮಂಜುನಾಥ್ ಅವರು ಡಿಸಿಎಂ ಡಿ. ಕೆ. ಶಿವಕುಮಾರ್ ಅವರಿಂದ ಸದಾಶಿವನಗರ ನಿವಾಸದಲ್ಲಿ ಬಿ ಫಾರಂ ಸ್ವೀಕರಿಸಿದರು.

