ಕುಡಿದ ನೆಶೆಯಲ್ಲಿ ವೀಲಿಂಗ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕರಿಂದ ಹಲ್ಲೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್,  ದೊಡ್ಡಬಳ್ಳಾಪುರ:
ರಾಜಘಟ್ಟ ಪಂಚಾಯಿತಿ ವ್ಯಾಪ್ತಿಯ ಕಂಚಿಗನಾಳ ಗ್ರಾಮದಲ್ಲಿ  ಯುಗಾದಿ ಹಬ್ಬದ ಸಂದರ್ಭದಲ್ಲಿ ಕುಡಿದ ನಶೆಯಲ್ಲಿ ವೀಲಿಂಗ್ ಮಾಡುತ್ತಿರುವಾಗ ಗ್ರಾಮದವರು ಪ್ರಶ್ನೆ ಮಾಡಿದ್ದಕ್ಕೆ ಯುವಕರು ದೊಣ್ಣೆ ಹಿಡಿದು ಹಲ್ಲೆ ಮಾಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಮತ್ತೊಂದು ಮಾಹಿತಿ ಪ್ರಕಾರ, ಹೊಸತಡಕು ದಿನ ಇಸ್ಪೀಟ್ ಆಡುವ ವಿಚಾರಕ್ಕೆ ಎರಡು ಯುವಕರ ಗುಂಪಿನ ನಡುವೆ ಜಗಳ ವಾಗಿದೆ ಎನ್ನಲಾಗಿದೆ. ಹೀಗಾಗಿ ನಡು ರಸ್ತೆಯಲ್ಲಿ ದೊಣ್ಣೆಗಳನ್ನಿಡಿದು ಯುವಕರು ಹೊಡೆ ದಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement - 

ಕಂಚಿಗನಾಳ ಗ್ರಾಮದ ಯುವಕರ ಮೇಲೆ ಬೀಡಿಗೆರೆ ಹಾಗೂ ರಾಜಘಟ್ಟ ಯುವಕರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತಪ್ಪಿತಸ್ಥ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಂಚಿಗನಾಳ ಗ್ರಾಮಸ್ಥರ ಆಗ್ರಹಿಸಿದ್ದಾರೆ.

- Advertisement - 

ಬೀಡಗೆರೆ ಹಾಗು ರಾಜಘಟ್ಟ ಯುವಕರು  ಕಂಚಿಗನಾಳ ಗ್ರಾಮದಲ್ಲಿ ಬಂದು ವಿಲೀಂಗ್ ಪುಂಡಾಟಿಕೆಯಿಂದ ಬೇಸತ್ತ ಕಂಚಿಗನಾಳ ಗ್ರಾಮಸ್ಥರು  ಹಾಗು ಗ್ರಾಮ ಪಂಚಾಯಿತಿಯ ಸದಸ್ಯ.  ವಿಚಾರಿಸಲು ಹೋದಾಗ  ದೊಣ್ಣೆಯಿಂರ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಆನಂದ್, ಕಂಚಿಗನಾಳ, ಹಲ್ಲೆಗೆ ಒಳಗಾದವರು.

ನಾವು ಒಂದೆ ಗ್ರಾಮ ಪಂಚಾಯಿತಿ ಯವರು ನಮ್ಮಲ್ಲಿ ಜಗಳ ಬೇಡ ಎಂದು ಹೇಳಲು ಹೋದಾಗ ನನಗೂ ದೊಣ್ಣೆ ಹಾಗು ಗಾಜಿನ ಬಾಟಲಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ”.
ದೇವರಾಜ್, ರಾಜಘಟ್ಟ ಗ್ರಾಮ ಪಂಚಾಯಿತಿ ಸದಸ್ಯ, ಹಲ್ಲೆಗೊಳಗಾದ ವ್ಯಕ್ತಿ.

 

Share This Article
error: Content is protected !!
";