ಹರಕೆ ಕತೆ: ಭಾಗ-1 ಕುಮಾರ್ ಬಡಪ್ಪ.

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ
ಸಿದಗಯ್ಯನಿಗೆ ಅದೇ ಚಿಂತೆ ಬೆಂಬಿಡದೆ ಕಾಡುತ್ತಿತ್ತು,ಕಳೆದ ಸಾಲಿನ ಫಸಲಂತೂ ಅಷ್ಟಕಷ್ಟೇ, ಆಟೋ ಈಟೋ ಮಳೆಯಾಗಿ ಕಾಳಿಲ್ದಂಗಾಗಿದ್ದ ಕಾಲ, ಇನ್ನು ಸಾಲ ತೀರಿಸೋದಾದ್ರು ಎಲ್ಲಿ?.

ಹೆಣ್ತಿ ಕಿವಿಯಾಗಿನಾವು ಒತ್ತೆಯಿಟ್ಟು ಗೊಬ್ಬರ ತಂದು ಬಿತ್ತಿದ್ದೂ ಹಾಳಾಗಿ ಹೋಗಿತ್ತು, ಬಂದರಿಕೆ ಸರಬಿನ ನೆರಿಕೆ,ಬಾದೆ ಹುಲ್ಲಿನ ಹೊದದಿಕೆಯ ಗುಡಿಸಿಲಿನಲ್ಲಿ,ಗೋಣಿ ತಾಟಿನ ಹಾಸಿಗೆಗೆ ತಲೆಯಿಟ್ಟು ಬೆಚ್ಚಗೆ ಮಲಗಿದ್ದ ಹೆಂಡತಿ ನಾಗವ್ವ, ಮೂರು ಮಕ್ಕಳ ಜೊತೆ ಗಾಢ ನಿದ್ರೆಯಲ್ಲಿದ್ದರೂ,ಸಿದಗಯ್ಯನಿಗೆ ಮಾತ್ರ ನಿದ್ದೆ ಹತ್ತಿರಲಿಲ್ಲ,ಸಣ್ಣಗೆ ಮಾಡಿಕೊಂಡಿದ್ದ ಚಿಮಣಿ ಬುಡ್ಡಿಯ ಬೆಳಕು,ಹಾಗೇ ಮಂದವಾಗಿ ಚೆಲ್ಲಿಕೊಂಡಿತ್ತು,ಊರ ಸುತ್ತಲಿನ ತುಸು ದೂರದ ಹೊಲಗಳಲ್ಲಿ, ಬೊಬ್ಬೆಯಿಡುತ್ತಿದ್ದ ಗುಳ್ಳೆ ನರಿಗಳ ಸದ್ದು,ಅವಕ್ಕೆ ಉತ್ತರವಾಗಿ ಊರ ನಾಯಿಗಳ ಸದ್ದು,ಇಡೀ ಕೇರಿ ತಣ್ಣಗೆ ಮಲಗಿದ್ದರಿಂದ ಸದ್ದು ಮಾತ್ರ ಶೆಲೆ ಹೊಡೆಯುವಂತೆ ಕಿವಿಗೆ ಅಪ್ಪಳಿಸುತ್ತಿತ್ತು,ಡಾಂಬರಿನ ತಗಡನ್ನು ಬಾಗಿಲಿಗೆ ಅಡ್ಡ ಇಟ್ಟುಕೊಂಡವನೇ ಬಿದಿರು ಕೋಲಿನ ಬಿರಿಯನ್ನು ಭದ್ರಪಡಿಸಿ ನೆಲಕ್ಕೆ ಹಾಸಿಕೊಂಡಿದ್ದ ತಾಟಿಗೆ ಒರಗಿದ,ಇಷ್ಟಾದರೂ ನಿದ್ದೆ ಆಸುಪಾಸಿಗೂ ಸುಳಿಯಲಿಲ್ಲ ಹೊರಳಾಡುತ್ತಲೇ ಇದ್ದ ಸುಮಾರು ಹೊತ್ತಿನವರೆಗೆ.

- Advertisement - 

  ಮಾರವ್ವನ ಗುಡಿಯ ಪೂಜಾರಿ ದ್ಯಾಮಯ್ಯ,ಮೊನ್ನೆ ಊರು ಜನರ ಸಮ್ಮುಖದಲ್ಲಿ ದೇವರನ್ನ ಹೊರಾಗ ಹೊರಡಿಸಿ ಅಪ್ಪಣೆ ಕೊಡಿಸಿದ್ದ,ಊರಿಗೆ ರೋಗ ರುಜಿನಗಳು ಬಂದ್ರೆ 2 ತಿಂಗ್ಳಿಗೋ 3 ತಿಂಗ್ಳಿಗೋ ಕಾಳವ್ವ ಹೊರಗೆ ಬಂದು, ಊರು ಆಡ್ತಾ ಪೂಜಾರಿ ಮೈಯ್ಯಾಗ ಹೊಕ್ಕು ಹೇಳಿಕೆ ಕೊಡುತ್ತಿದ್ಲು, ಅಂಥಾದ್ದೇ ಪ್ರಸಂಗಕ್ಕೆ ಈ ಹೊತ್ತು ಗುಡಿ ಬಿಟ್ಟು ಬಯಲಿಗೆ ಬಂದಿದ್ಲು ಕಾಳವ್ವ! ಚಂದ್ರಯ್ಯನ ಕಿವಿಗಡಚಿಕ್ಕುವ ಉರುಮೆ ಸದ್ದು, ಮಾರಯ್ಯ- ದುರ್ಗಪ್ಪನ ತಪ್ಪಡೆ ಕಡ್ಡಿ ಸದ್ದಿಗೆ ಕೇರಿಯೇ ಜಮಾಯಿಸಿತ್ತು,ಅಗಸರ ಗಂಗಯ್ಯ ಪಂಜು ಹಿಡಿದು ಬೆಳಕು ಮಾಡಿದ್ರೆ, ಹೆಣ್ತಿ ಲಕ್ಷ್ಮವ್ವ ಕಾಳವನ್ನ ಹೊತ್ತ ದ್ಯಾಮಯ್ಯನ್ನ ನೆಲ ತುಳಿಯಾಕೆ ಬಿಡದೆ ಹಾಸಿದ ಮಡಿ ಸೀರೆಯಲ್ಲೇ ಊರ ಮುಂದಿನ ಬನ್ನಿ ಕಟ್ಟಿಗೆ ಕರೆ ತಂದಿದ್ಲು, ಅರಿಶಿನ ಕುಂಕುಮ ಮೆತ್ತಿಕೊಂಡಿದ್ದ ದ್ಯಾಮಯ್ಯ,ಕುಣಿಯುತ್ತಲೇ ಬೇವಿನ ಸೊಪ್ಪನ್ನು ಮೂಸಿ ನೋಡುತ್ತಾ, ಗಂಟೆಯ ಸದ್ದಿನೊಂದಿಗೆ ನಾನು ಮನುಷ್ಯನಲ್ಲ ದೇವರನ್ನ ಆವಾಹನೆ ಮಾಡಿಕೊಳ್ಳುತ್ತಿದ್ದೇನೆ ಎಂಬಂತೆ ಹೆಜ್ಜೆ ಹಾಕ ತೊಡಗಿದ್ದ. ಅವ್ವ ಗುಡಿ ಬಿಟ್ಟು ಬನ್ನಿಕಟ್ಟೆಗೆ ಬಂದ್ರೆ ಎಲ್ಲಾ ರೀತಿಯ ತೊಂದ್ರೆ ತಾಪತ್ರಯಕ್ಕೆ ಪ್ರಶ್ನೆ ಕೇಳಾಕೆ ಅಪ್ಪಣೆ ಇರೋದು ಹಿಂದಿನ ತಲೆಮಾರಿನಿಂದ ಈರಯ್ಯ ಗೌಡನ ಕುಟುಂಬಕ್ಕೆ ಮಾತ್ರ! ಹಾಗಾಗಿ ಜನ ಅವ್ವನಿಗೆ ಕೇಳೊ ಪ್ರಶ್ನೆಗಳನ್ನು ಗೌಡನಿಗೆ ಹೇಳಿ, ಪಕ್ಕಕ್ಕೆ ಸರಿದು ಕೈ ಮುಗಿದು ಕೇಳ್ತಿದ್ರು, ಈ ಹೊತ್ತು ಅಂಥಾದ್ದೇ ಒಂದು ಯಕ್ಷಪ್ರಶ್ನೆ ಕಾಳವ್ವನ ಮುಂದೆ ಈರಯ್ಯಗೌಡ ಹೊತ್ತು ತಂದಿದ್ದ, ಹಳ್ಳಿಯಿಂದ ದೂರದ ದಾರಿಯಾಗ ಹೋಗಿ ಪ್ಯಾಟೆ ಸಾಲಿಯಲ್ಲಿ ಕುಂತು ಬರಬೇಕಾಗಿತ್ತು ಇಲ್ಲಿನ ಮಕ್ಕಳು, ಅಂಥಾದ್ದೊಂದು ಓದೋ ಸಾಲೆ ನಮ್ಮ ಹಳ್ಳಿಗೆ ಬೇಕು ಅನ್ನೋದು ಜನರ ವಾದನಾಳೆಗೆ ಮುಂದುವರೆಯಲಿದೆ…
ಲೇಖನ-ಕುಮಾರ ಬಡಪ್ಪ, ಚಿತ್ರದುರ್ಗ.

- Advertisement - 
Share This Article
error: Content is protected !!
";